ಬೆಂಗಳೂರು,ಫೆ.26-ರಸ್ತೆಬದಿ ನಿಲ್ಲಿಸಿದ್ದ ಮಿನಿಗೂಡ್ಸ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸಾಫ್ಟ್ವೇರ್ ಇಂಜಿನಿಯರ್ ಮೃತಪಟ್ಟಿರುವ ಘಟನೆ ಮಡಿವಾಳ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.
ಕಾರ್ಕಳ ಮೂಲದ ಸಾಗರ್ ಪ್ರಭಾಕರ್ ಶೆಟ್ಟಿ(25) ಮೃತಪಟ್ಟಿರುವ ಸಾಫ್ಟ್ವೇರ್ ಇಂಜಿನಿಯರ್.
ಹೊಸೂರು ರಸ್ತೆಯ ಗಾರ್ವೆಬಾವಿಪಾಳ್ಯ-ಬೊಮ್ಮನಹಳ್ಳಿ ಮಧ್ಯೆ ಆರ್ಎನ್ಎಸ್ ಮೋಟಾರ್ಸ್ ಸಮೀಪ ರಸ್ತೆಬದಿ ಮಿನಿ ಗೂಡ್ಸ್ ಲಾರಿಯನ್ನು ನಿರ್ಮಿಸಲಾಗಿತ್ತು.
ಹೊಸಪಾಳ್ಯದಲ್ಲಿ ವಾಸವಾಗಿದ್ದ ಸಾಗರ್ ಇಂದು ಬೆಳಗಿನ ಜಾವ 1.15ರಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಇವರಿಗೆ ವಾಹನ ನಿಂತಿರುವುದು ಗಮನಕ್ಕೆ ಬರದೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ಮಡಿವಾಳ ಸಂಚಾರಿ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶವವನ್ನು ಸೆಂಟ್ಜಾನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೊಳಪಡಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.