ನೂತನ ಪಡಿತರ ಚೀಟಿಯಲ್ಲಿನ ಗೊಂದಲ ನಿವಾರಿಸಿ
ಬೀದರ್. ಫೆ.26: ರಾಜ್ಯ ಸರ್ಕಾರ ಇತ್ತಿಚೆಗೆ ಆದೇಶಿಸಿ, ಹೊಸದಾಗಿ ಪಡಿತರ ಚೀಟಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದರೇ ಶಿಘ್ರವೇ ನೂತನ ಪಡಿತರ ಚೀಟಿ ಕೊಡುವಂತೆ ಕ್ರಮ ಜರುಗಿಸಲಾಗುವುದು ಎಂದು ಪತ್ರಿಕೆಗಳಲ್ಲಿ ಜಾಹಿರಾತು ಸಹ ನಿಡಿತ್ತು.
ಅದರಂತೆ ನೂತನ ಪಡಿತರ ಚೀಟಿಗಾಗಿ ಆನ್‍ಲೈನ್‍ನಲ್ಲಿ ಹೊಸದಾಗಿ ಸಲ್ಲಿಸಿದವರ ಅರ್ಜಿಗಳನ್ನು ಕೂಡಲೇ ಪರಿಗಣಿಸಿ, ಪಡಿತರ ಚೀಟಿ ನೀಡಲು ಕ್ರಮ ಕೈಗೋಳ್ಳುವಂತೆ ಸೂಚಿಸಿತ್ತು. ಆದರಿಂದ ಅರ್ಜಿದಾರರು ಎಲ್ಲೇಡೆ ಅಂದರೇ ಆಯಾ ಆನ್‍ಲೈನ್ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಪಡಿತರ ಚೀಟಿಗಳಿಗಾಗಿ ಸಂಬಂಧಿಸಿದ ಕಚೇರಿಗಳಿಗೆ ತೆರಳಿ, ಅಲ್ಲಿರುವ ಅಧಿಕಾರಿಗಳಿಗೆ ವಿಚಾರಿಸಿದಾಗ ನಿಮ್ಮ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ ಸಲ್ಲಿಸಿ, ಆದಾಯ ಪ್ರಮಾಣ ಪತ್ರ ಇದ್ದರೇ ಸಧ್ಯವೇ ತೋರಿಸಿ ಎಂದು ಕರಾರುವತ್ತಾಗಿ ಅರ್ಜಿದಾರರಿಗೆ ಹೇಳಿಕೆ ನೀಡುತ್ತಿದ್ದಾರೆ. ಆದರೇ ಹೊಸ ಪಡಿತರ ಚೀಟಿಯ ಕುರಿತು ಕ್ರಮ ಕೈಗೋಳ್ಳದೇ ಅಧಿಕಾರಿಗಳು ಅರ್ಜಿದಾರರಿಗೆ ವಾಪಾಸ್ಸು ಕಳಿಸುತ್ತಿದ್ದಾರೆ.
ಏತನ್ಮದ್ದ್ಯೆ ನೋವಿನ ಸಂಗತಿ ಎಂದರೇ, ಆದಾಯ ಪ್ರಮಾಣ ಪತ್ರ ತರಲೂ ನೆಮ್ಮದಿ ಕೇಂದ್ರಗಳಿಗೆ ಹೋದಾಗ, ಪಡಿತರ ಚೀಟಿಯ ನಕಲು ಪ್ರತಿ ಕೆಳುತ್ತಿದ್ದಾರೆ. ಅಲ್ಲದೇ ನೂತನ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವಾಗ ಆದಾಯ ಪ್ರಮಾಣ ಪತ್ರಕ್ಕಾಗಿ ಪಡಿತರ ಚೀಟಿ ಎಲ್ಲಿಂದ ತರಬೇಕು? ಗ್ರಾಮ ಲೆಕ್ಕಿಗ, ಕಂದಾಯ ನೀರಿಕ್ಷಕ, ನೋಡೆಲ್ ಅಧಿಕಾರಿಗಳಿಗೆ ತಕ್ಷಣವೇ ಸೂಕ್ತ ನಿರ್ದೇಶನ ನೀಡಿ, ಈ ಗೊಂದಲವನ್ನು ನಿವಾರಿಸಲು, ಸರ್ಕಾರದ ಉನ್ನತ ಅಧಿಕಾರಿಗಳು ತಕ್ಷಣವೇ ಪಡಿತರ ಚೀಟಿ ನೀಡುವ ಸರಳಿಕರಣದ ಕ್ರಮ ಜರುಗಿಸಿ ನ್ಯಾಯ ನೀಡಬೇಕು ಎಂದು ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ಹಾಗೂ ಅಂಬೇಡ್ಕರ್ ಯುವ ಸೇನೆಯ ರಾಜ್ಯ ಉಪಾಧ್ಯಕ್ಷ ಎಂ.ಪಿ. ಮುದಾಳೆಯವರು ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಒಂದು ವಾರದೋಳಗಾಗಿ ಗೊಂದಲ ನಿವಾರಣೆ ಮಾಡದಿದ್ದರೇ, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.