ದಿ.28 ರಂದು ರೇಣುಕಾಚಾರ್ಯ ಹಾಗೂ ಕುಮಾರೇಶ್ವರ ಜಯಂತಿ ಆಚರಣೆ

ಬಾಗಲಕೋಟ : ವೀರಶೈವ ಧರ್ಮ ಸಂಸ್ಥಾಪಕರಾದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಕರಾದ ಹಾನಗಲ್ಲ ಕುಮಾರೇಶ್ವರ ಶಿವಯೋಗಿಗಳ 150 ನೇ ಜಯಂತಿಯನ್ನು ದಿನಾಂಕ : 28 ಬುಧುವಾರದಂದು ವಿಜೃಂಭಣೆಯಿಂದ ಆಚರಿಸಲಾಗುವುದು.
ಅಂದು ಬೆಳಿಗ್ಗೆ ಶ್ರೀ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆವರಣದಲ್ಲಿರುವ ಬೀಳೂರು ಶ್ರೀ ಗುರುಬಸವ ಅಜ್ಜನವರ ಗುಡಿಯಿಂದ ಪೂಜ್ಯರ ಭಾವಚಿತ್ರದ ಮೆರವಣಿಗೆಗೆ ಶ್ರೀ ಷ.ಬ್ರ. ಸಿದ್ದಲಿಂಗ ಶೀವಾಚಾರ್ಯರು ಬಿಲ್ವಾಶ್ರಮ ಬಿಲ್‍ಕೆರೂರ ಹಾಗೂ ಶ್ರೀ ಮ.ನಿ.ಪ್ರ.ಸ್ವ.ಹುಚ್ಚೇಶ್ವರ ಮಹಾಸ್ವಾಮಿಗಳು ಹೊಳೆಹುಚ್ಚೇಶ್ವರ ಮಠ ಕಮತಗಿಯ ಮಹಾಸ್ವಾಮಿಗಳು ಚಾಳನೆ ನೀಡಲಿದ್ದು. ಮೆರವಣಿಗೆಯು ಬಸವೇಶ್ವರ ವೃತ್ತ, ಎಂ.ಜಿ.ರೋಡ, ವಲ್ಲಭಭಾಯಿ ಚೌಕ್, ಅಡತ ಬಜಾರದಿಂದ ಟೀಕಿನಮಠದ ಮುಖಾಂತರವಾಗಿ ಮರಳಿ ಬೀಳೂರು ಅಜ್ಜನವರ ಗುಡಿಯ ಹತ್ತಿರ ಸಮಾರೋಪಗೊಳ್ಳುವುದು.
ಕಾರಣ ಸಕಲ ಸಮಾಜದ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ, ಅಕ್ಕನ ಬಳಗ, ಹಾಗೂ ತಾಲೂಕಾ ಜಂಗಮರ ಕ್ಷೇಮಾಭಿವೃದ್ದಿ ಸಂಘ ಬಾಗಲಕೋಟ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ