ಶ್ರೀ ದುರ್ಗಾಂಬಿಕ ಮಹೋತ್ಸವದಲ್ಲಿ ಬಲಿಯನ್ನು ನಿಷೇಧಿಸಲಾಗಿದೆ

ದಾವಣಗೆರೆ,ಫೆ.26- ನಗರದೇವತೆ ಶ್ರೀ ದುರ್ಗಾಂಬಿಕ ಮಹೋತ್ಸವದಲ್ಲಿ ಕುರಿ, ಕೋಣ ಬಲಿಯನ್ನು ನಿಷೇಧಿಸಲಾಗಿದೆ ಎಂದು ದೇವಸ್ಥಾನದ ಸಮಿತಿಯ ಅಧ್ಯಕ್ಷ , ಶಾಸಕ ಶ್ಯಾಮನೂರು ಶಿವಶಂಕರಪ್ಪ ಹೇಳಿದರು.

ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಮತ್ತು 28ರಂದು ಮಹೋತ್ಸವ ನಡೆಯಲಿದ್ದು , ಹುಬ್ಬಳ್ಳಿ-ಧಾರವಾಡದಿಂದ ಕೋಣವನ್ನು ತಂದು ಮೆರವಣಿಗೆ ಮಾಡಲಾಗುವುದು. ಸಿರಂಜನ್‍ನಿಂದ ಅದರ ರಕ್ತ ತೆಗೆದು ಸಮರ್ಪಿಸಲಾಗುವುದು ಎಂದು ಹೇಳಿದರು.

ಮೂರು ವರ್ಷಕ್ಕೊಮ್ಮೆ ನಡೆಯುವ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಬರುವ ನಿರೀಕ್ಷೆಯಿದ್ದು , ಎಲ್ಲ ಸೌಲಭ್ಯ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆಯಿಂದ ನೀರಿನ ಸೌಲಭ್ಯ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಕಳೆದ ಹಲವು ದಿನಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ದೇವಾಲಯದ ಆವರಣದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ