ದಾವಣಗೆರೆ,ಫೆ.26- ನಗರದೇವತೆ ಶ್ರೀ ದುರ್ಗಾಂಬಿಕ ಮಹೋತ್ಸವದಲ್ಲಿ ಕುರಿ, ಕೋಣ ಬಲಿಯನ್ನು ನಿಷೇಧಿಸಲಾಗಿದೆ ಎಂದು ದೇವಸ್ಥಾನದ ಸಮಿತಿಯ ಅಧ್ಯಕ್ಷ , ಶಾಸಕ ಶ್ಯಾಮನೂರು ಶಿವಶಂಕರಪ್ಪ ಹೇಳಿದರು.
ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಮತ್ತು 28ರಂದು ಮಹೋತ್ಸವ ನಡೆಯಲಿದ್ದು , ಹುಬ್ಬಳ್ಳಿ-ಧಾರವಾಡದಿಂದ ಕೋಣವನ್ನು ತಂದು ಮೆರವಣಿಗೆ ಮಾಡಲಾಗುವುದು. ಸಿರಂಜನ್ನಿಂದ ಅದರ ರಕ್ತ ತೆಗೆದು ಸಮರ್ಪಿಸಲಾಗುವುದು ಎಂದು ಹೇಳಿದರು.
ಮೂರು ವರ್ಷಕ್ಕೊಮ್ಮೆ ನಡೆಯುವ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಬರುವ ನಿರೀಕ್ಷೆಯಿದ್ದು , ಎಲ್ಲ ಸೌಲಭ್ಯ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯಿಂದ ನೀರಿನ ಸೌಲಭ್ಯ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಕಳೆದ ಹಲವು ದಿನಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ದೇವಾಲಯದ ಆವರಣದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.