ನವದೆಹಲಿ,ಫೆ.26- ಭಾರತೀಯ ರೈಲ್ವೆ ವಿಶ್ವದಾಖಲೆ ನಿರ್ಮಿಸುವ ಹಾದಿಯಲ್ಲಿದೆ. ರೈಲ್ವೆ ಇಲಾಖೆಯ ಸುರಕ್ಷತೆಗೆ ಸಂಬಂಧಪಟ್ಟಂತೆ 90,000 ಕಾರ್ಮಿಕರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಇದು ವಿಶ್ವದ ಅತಿದೊಡ್ಡ ನೇಮಕಾತಿ ಪ್ರಕ್ರಿಯೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಲೋಕೋ ಪೈಲೆಟ್ಗಳು, ತಂತ್ರಜ್ಞರು,ಗ್ಯಾಂಗ್ಮನ್ಗಳು, ಸ್ವಿಚ್ಮ್ಯಾನ್ಗಳು, ಟ್ರ್ಯಾಕ್ಮೆನ್ಗಳು, ಕ್ಯಾಬೀನ್ಮೆನ್ಗಳು, ವೆಲ್ಡರ್, ಹೆಲ್ಪರ್ ಮತ್ತು ಪೋರ್ಟರ್ಗಳು ಸೇರಿದಂತೆ 89500 ಕಾರ್ಮಿಕರ ಆಯ್ಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.
ರೈಲ್ವೆ ಸಚಿವ ಪಿಯೂಶ್ ಗೋಯಲ್ ರೈಲ್ವೆ ಸುರಕ್ಷತೆಗೆ ನೀಡಿರುವ ಆದ್ಯತೆ ಹಿನ್ನೆಲೆಯಲ್ಲಿ ಈ ಹುದ್ದೆಗಳ ಭರ್ತಿಗೆ ನಿರ್ಧಾರ ಕೈಗೊಂಡಿದ್ದು ,ಅದರ ಬೆನ್ನಲ್ಲೇ ಭಾರೀ ಸಂಖ್ಯೆಯಲ್ಲಿ ನೌಕರರ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ.