ಮಂಡ್ಯ, ಫೆ.26-ಇಲ್ಲಿನ ಅಮರನಾಥ ಆಟೋ ಗ್ಯಾರೇಜ್ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಎರಡು ಕಾರು ಸುಟ್ಟು ಭಸ್ಮವಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಉಪೇಂದ್ರ ಎಂಬುವರಿಗೆ ಸೇರಿದ ಮಂಡ್ಯ ಷುಗರ್ ಫ್ಯಾಕ್ಟರಿ ಸರ್ಕಲ್ ಸಮೀಪವಿರುವ ಅಮರನಾಥ ಆಟೋ ಗ್ಯಾರೇಜ್ನಲ್ಲಿ ಈ ಅವಘಡ ಸಂಭವಿಸಿದೆ. ರಿಪೇರಿ ಸರ್ವೀಸ್ಗೆಂದು ಗ್ರಾಹಕರು ಗ್ಯಾರೇಜ್ನಲ್ಲಿ ತಮ್ಮ ಕಾರುಗಳನ್ನು ಬಿಟ್ಟು ಹೋಗಿದ್ದರು. ಮಾಲೀಕರು ಸಹ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು ಎನ್ನಲಾಗಿದೆ. ನಂತರ ಗ್ಯಾರೇಜ್ನಲ್ಲಿ ಬೆಂಕಿ ಧಗಿಧಗಿಸುತ್ತಿರುವುದನ್ನು ಕಂಡ ಸ್ಥಳೀಯರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ಸಾಧಿಸಿದ್ದಾರೆ. ಈ ಗ್ಯಾರೇಜ್ ಸುತ್ತಮುತ್ತ ವರ್ಕ್ಶಾಪ್ಗಳೇ ಇರುವುದರಿಂದ ಶೀಘ್ರವಾಗಿ ಬೆಂಕಿ ನಂದಿಸದಿದ್ದರೆ ದೊಡ್ಡ ಅನಾಹುತ ನಡೆಯುತ್ತಿತ್ತು. ದುರಾದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬದಲಾಗಿ ಕಾರಿನ ಜತೆ ಗ್ಯಾರೇಜ್ ಕೂಡ ಭಾಗಶಃ ಸುಟ್ಟು ಹೋಗಿದೆ.
ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ