ಲಂಡನ್, ಫೆ.26- ಇಂಗ್ಲೆಂಡ್ನ ಲೀಸೆಸ್ಟರ್ ನಗರದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ ನಾಲ್ವರು ಮೃತಪಟ್ಟು ಅನೇಕರು ಗಾಯಗೊಂಡಿದ್ಧಾರೆ. ಆದರೆ ಇದು ಭಯೋತ್ಪಾದಕರ ದಾಳಿ ಸಾಧ್ಯತೆಯನ್ನು ಪೊಲೀಸರು ತಳ್ಳಿ ಹಾಕಿದ್ದಾರೆ.
ಲೀಸೆಸ್ಟರ್ ನಗರದ ಹಿಂಕ್ಲೇ ರಸ್ತೆ ಪ್ರದೇಶದ ವಾಣಿಜ್ಯ ಮತ್ತು ವಸತಿ ಸ್ಥಳದ ಕಟ್ಟಡದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ನಾಲ್ವರು ಮೃತಪಟ್ಟರು ಹಾಗೂ ಅಂಗಡಿ ಮತ್ತು ಫ್ಲಾಟ್ ಧ್ವಂಸವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಂಡನ್ನಿಂದ 143 ಕಿ.ಮೀ.ದೂರದಲ್ಲಿರುವ ಲೀಸೆಸ್ಟರ್ನ ಈ ಪ್ರದೇಶದಲ್ಲಿ ಗುಜರಾತ್ ಮೂಲದ ವಾಸಿಗಳೇ ಹೆಚ್ಚಾಗಿ ನೆಲೆಸಿದ್ದಾರೆ.