ಬಾಗಲಕೋಟ,25- ನಗರದ ದೊಡ್ಡಸಾಬಣ್ಣ ಓಣಿಯ ಮಹಿಳೆಯರು, ಅಧಿಕ ಸಂಖ್ಯೆಯ ಯುವಕರು ಕಾಂಗ್ರೆಸ್ ಸರಕಾರದ ಪಕ್ಷದ ಸಾಧನೆಗಳು, ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಮೆಚ್ಚಿ ಶಾಸಕ ಎಚ್.ವೈ.ಮೇಟಿ ಅವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ದಿ.24 ರ ಸಂಜೆ ಪಕ್ಷದ ಕಾರ್ಯಾಲಯದಲ್ಲಿ ನಡೆದ ಸೇರ್ಪಡೆ ಸಮಾರಂಭದಲ್ಲಿ ಶಾಸಕ ಎಚ್.ವೈ.ಮೇಟಿ ಮಾತನಾಡಿ ಪಕ್ಷದ ತತ್ವ ಸಿದ್ದಾಂತಗಳು ಹಾಗೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಕಾರ್ಯ ಚಟುವಟಿಕೆಗಳನ್ನು ಬಡವರ, ದೀನದಲಿತರ, ಅಲ್ಪಸಂಖ್ಯಾತರ ಬಗ್ಗೆ ಹೊಂದಿರುವ ಕಳಕಳಿಯನ್ನು ಮೆಚ್ಚಿಕೊಂಡು ಪಕ್ಷ ಸೇರ್ಪಡೆಯಾದವರನ್ನು ಸ್ವಾಗತಿಸಿ ಪಕ್ಷದ ಹಾಗೂ ಸರಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಅರ್ಹ ಫಲಾನುಭವಿಗಳಿಗೆ ಸರಕಾರದ ಯೋಜನೆಗಳನ್ನು ತಲುಪಿಸುವ ಹೊಣೆಗಾರಿಕೆ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮುಖಂಡರಾದ ಶ್ರೀಮತಿ ಕಮಲಾ ಮರಿಸ್ವಾಮಿ ಮಾತನಾಡಿ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಹಿಳೆಯರ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ಅನುಷ್ಟಾನಕ್ಕೆ ತಂದಿದೆ. ಬೀಡಿ ಕಟ್ಟುವ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ ಅಲ್ಲದೇ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಲ ಸೌಲಭ್ಯ, ಹೈನುಗಾರಿಕೆಗೆ ಉತ್ತೇಜನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ರಕ್ಷಿತಾ ಈಟಿ, ಪ್ರಭು ಹಗರಟಗಿ ಮಾತನಾಡಿದರು.
ಪಕ್ಷ ಸೇರ್ಪಡೆಯಾದ ಶ್ರೀಮತಿ ಊಟಿ ಅವರು ಮಾತನಾಡಿ ನಮ್ಮ ಭಾಗದಲ್ಲಿ ಅನೇಕ ಸಮಸ್ಯೆಗಳಿವೆ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರು.
ಪಕ್ಷ ಸೇರ್ಪಡೆಯಾದವರು: ಸಾಬಣ್ಣ ಊಟಿ, ಮಂಜುನಾಥ ಕಳ್ಳಿಗುಡ್ಡ, ಮುತ್ತು ದೇವದುರ್ಗ, ವೆಂಕಟೇಶ ಆಂದೇಲಿ, ಶ್ರೀಮತಿ ಪ್ರಭಾವತಿ ದೇವದುರ್ಗ, ಶ್ರೀಮತಿ ಹನಮಂತಿ ಊಟಿ, ಶ್ರೀಮತಿ ಸತ್ಯಮ್ಮ ದೇವದುರ್ಗ, ಶ್ರೀಮತಿ ಅಂಬಿಕಾ ಗಲಗ, ಶ್ರೀಮತಿ ಸುಮಾವತಿ ದೇವದುರ್ಗ ಸೇರಿದಂತೆ ಯುವಕರು, ಮಹಿಳೆಯರು ಸೇರ್ಪಡೆಯಾದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯೆ ಶ್ರೀಮತಿ ಬಾಯಕ್ಕ ಮೇಟಿ, ಜಿ.ಪಂ.ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಹೊಳೆಬಸು ಶೆಟ್ಟರ, ದ್ಯಾಮಣ್ಣ ಗಾಳಿ, ನಗರಸಭೆ ಸದಸ್ಯ ಹನಮಂತ ರಾಕುಂಪಿ, ತೆಂಗು ನಾರು ಮಂಡಳಿ ನಿರ್ದೇಶಕ ಮುತ್ತಣ್ಣ ಮುಳ್ಳೂರ, ಐ.ಎಂ.ಬಳಬಟ್ಟಿ, ಮಹೇಶ ಗದ್ದನಕೇರಿ, ಗಿರೀಶ ಹೆಬ್ಬಾಳ, ಭರತ ಈಟಿ ಸೇರಿದಂತೆ ಇನ್ನೀತರರು ಹಾಜರಿದ್ದರು.
ರಾಜು ಮನ್ನಿಕೇರಿ ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರು.