ಬೆಂಗಳೂರು, ಫೆ.24-ಐನೂರು ಹಾಗೂ ಒಂದು ಸಾವಿರ ಮುಖಬೆಲೆಯ ನೋಟು ಅಮಾನ್ಯಗೊಂಡು ಒಂದು ವರ್ಷ ಮೂರು ತಿಂಗಳು ಕಳೆದಿದ್ದರೂ ಅದನ್ನು ಬದಲಾವಣೆ ಮಾಡುವ ದಂಧೆ ನಗರದಲ್ಲಿ ಮುಂದುವರೆದಿದೆ.
ಈ ಅಕ್ರಮ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಈಶಾನ್ಯ ವಿಭಾಗದ ಪೆÇಲೀಸರು 1.95 ಮುಖಬೆಲೆಯ ಅಮಾನೀಕರಣ ನೋಟು ಹಾಗೂ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಆರೋಪಿಗಳು ಕೊತ್ತನೂರು ಅಪಾರ್ಟ್‍ಮೆಂಟ್ ಬಳಿ ಹಳೇ ನೋಟು ಬದಲಾವಣೆ ವ್ಯವಹಾರ ಕುದುರಿಸಲು ಬರುತ್ತಿದ್ದಾರೆ ಎಂಬ ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆಗಿಳಿದ ಪೆÇಲೀಸರು ಮೂವರನ್ನು ಹಣದ ಸಮೇತ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ನೋಟಿನ ಮೂಲ ಮತ್ತು ಅದನ್ನು ಯಾರ ಬಳಿ ಆರೋಪಿಗಳು ಬದಲಾವಣೆ ಮಾಡುತ್ತಿದ್ದರು ಎಂಬ ಮತ್ತಿತರ ಸಂಗತಿಗಳ ಬಗ್ಗೆ ವಿಚಾರಣೆ ಮುಂದುವರೆದಿದೆ ಎಂದು ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.