![modi](http://kannada.vartamitra.com/wp-content/uploads/2018/02/modi-2.jpg)
ಚೆನ್ನೈ: ತಮಿಳುನಾಡು ಸರ್ಕಾರದ ಮಹತ್ವಾಕಾಂಕ್ಷಿ ಅಮ್ಮ ದ್ವಿಚಕ್ರ ವಾಹನ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರಮೋದಿ ಶನಿವಾರ ಚಾಲನೆ ನೀಡಿದ್ದಾರೆ.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಪಳನಿಸ್ವಾಮಿ, ಡಿಸಿಎಂ ಪನ್ನೀರ್ ಸೆಲ್ವಂ ಸೇರಿದಂತೆ ತಮಿಳುನಾಡು ಸಂಪುಟ ಸದಸ್ಯರ ಸಮ್ಮುಖದಲ್ಲಿ ಯೋಜನೆಗೆ ಚಾಲನೆ ನೀಡಿದರು.‘
ದಿವಂಗತ ಮಾಜಿ ಸಿಎಂ ಜಯಲಲಿತಾ ಅವರ ಕನಸಿನ ಯೋಜನೆ ಇದಾಗಿದ್ದು, ಯೋಜನೆಯಡಿ ಮಹಿಳೆಯರು ದ್ವಿಚಕ್ರ ವಾಹನ ಖರೀದಿಗೆ ಸರ್ಕಾರದಿಂದ 25,000 ರೂ. ಸಬ್ಸಿಡಿ ಸಿಗಲಿದೆ. 2016ರ ಚುನಾವಣೆ ಸಂದರ್ಭದಲ್ಲೇ ಎಐಎಡಿಎಂಕೆ ಯೋಜನೆ ಬಗ್ಗೆ ಮತದಾರರಿಗೆ ಭರವಸೆ ನೀಡಿತ್ತು. ಜಯಲಲಿತಾ ನಿಧನದ ಬಳಿಕ ಈ ಯೋಜನೆ ಘೋಷಿಸುವ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ನೇತೃತ್ವದ ಸರ್ಕಾರ ಮತದಾರರ ಮನ ಸೆಳೆಯಲು ಮುಂದಾಗಿದೆ.
ಅಮ್ಮ ಯೋಜನೆಗೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರಮೋದಿ ಭವಿಷ್ಯದ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಗೆ ಮುನ್ನುಡಿ ಬರೆದಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಹಿಂದೆ, ಪನ್ನೀ ಸೆಲ್ವಂ ಮತ್ತು ಪಳನಿಸ್ವಾಮಿ ಬಣಗಳು ಒಂದಾಗಿ, ದಿನಕರನ್ ಮತ್ತು ಶಶಿಕಲಾ ಅವರನ್ನ ಹೊರಗಿಡುವುದರಲ್ಲಿ ನರೇಂದ್ರಮೋದಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಮಾತುಗಳಿದ್ದವು. ಇದೀಗ, ಆ ಮಾತಿಗೆ ಇಂಬು ನೀಡುವ ರೀತಿ ಚೆನ್ನೈ ಪ್ರವಾಸದಲ್ಲಿರುವ ಮೋದಿ, ಅಮ್ಮ ಯೋಜನೆಗೆ ಚಾಲನೆ ನೀಡಿ ರಾಜಕೀಯ ಪಂಡಿತರ ವಿಶ್ಲೇಷಣೆಗಳಿಗೆ ದಾರಿಮಾಡಿಕೊಟ್ಟಿದ್ದಾರೆ