ಭಾರತೀಯ ಚಿತ್ರರಂಗದ ಮೋಹಕ ನಟಿ ಶ್ರೀದೇವಿ ಇನ್ನಿಲ್ಲ

ದುಬೈ: ಭಾರತೀಯ ಚಿತ್ರರಂಗ ಅಪ್ರತಿಮ ಸುಂದರಿ, ಹಿರಿಯ ನಟಿ ಶ್ರೀದೇವಿ(54) ಬಣ್ಣದ ಲೋಕಕ್ಕೆ ವಿದಾಯ ಹೇಳಿ, ಬಾರದ ಲೋಕಕ್ಕೆ ತೆರಳಿದ್ದಾರೆ.

ದುಬೈನಲ್ಲಿ ತಮ್ಮ ಕುಟಂಬದ ವಿವಾಹದಲ್ಲಿ ಪಾಲ್ಗೊಳ್ಳಲು ತಮ್ಮ ಪತಿ ಬೋನಿ ಕಪೂರ್ ಹಾಗೂ ಪುತ್ರಿ ಖೂಷಿ ಅವರೊಂದಿಗೆ ತೆರಳಿದ್ದ ಶ್ರೀದೇವಿ ತಡರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ.

1963ರಲ್ಲಿ ಜನಿಸಿದ್ದ ಶ್ರೀದೇವಿ, ತಮ್ಮ ನಾಲ್ಕನೆಯ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟು, ಬಾಲ್ಯದಲ್ಲಿಯೇ ಅಪ್ರತಿಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಇವರ ನಟನೆಗೆ ಮನಸೋಲದ ಚಿತ್ರರಸಿಕರು ಬಹುಷಃ ಯಾರೂ ಇರಲಿಕ್ಕಿಲ್ಲ.

ಶ್ರೀದೇವಿ ನಿಧನದ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಮುಂಬೈನ ಅಂಧೇರಿಯಲ್ಲಿರುವ ಅವರ ನಿವಾಸದ ಮುಂದೆ ಅಭಿಮಾನಿ ಜಮಾಯಿಸಿದ್ದಾರೆ.

Photo Source: google

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ