ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಡಿ ಬಂಧನ: ಹಿಂದೂ ಕಾರ್ಯಕರ್ತ ಎಂಬ ವದಂತಿ, ಸ್ಪಷ್ಟನೆ ನೀಡಲಿದೆ ವೇದಿಕೆ

ಬೆಂಗಳೂರುಅಕ್ರಮ ಶಸ್ತ್ರಾಸ್ತ್ರ ಕಾಯ್ಡೆಯಡಿ ಮದ್ದೂರು ತಾಲೂಕಿನವನೊಬ್ಬನನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದು, ಆತ ಹಿಂದು ಕಾರ್ಯಕರ್ತ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣದಲ್ಲಿ ಆತನ ಬಂಧನವಾಗಿದೆ ಎಂಬ ವಂದತಿಗಳು ಹರಡಿವೆ. ಈ ಬಗ್ಗೆ ಹಿಂದು ಜಾಗರಣ ವೇದಿಕೆ ಸ್ಪಷ್ಟನೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಕೆ.ಟಿ. ನವೀನ್ ಅಲಿಯಾಸ್‌ ಹೊಟ್ಟೆಮಂಜ ಎಂಬಾತನೇ ಬಂಧಿತ ಆರೋಪಿ, ಅಕ್ರಮಶಸ್ತ್ರಾಸ್ತ್ರ ಕುರಿತು ಮಾಹಿತಿ ಕಲೆ ಹಾಕುವಾಗ ಮದ್ದೂರಿನ ಮಂಜುನಾಥನ ಬಗ್ಗೆ ಸುಳಿವು ಸಿಕ್ಕಿತು. ಈ ಸುಳಿವು ಆಧರಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. ಅನುಮಾನದ ಮೇರೆಗೆ ಗೌರಿ ಲಂಕೇಶ್‌ ಪ್ರಕರಣದಲ್ಲಿ ಸಹ ಪ್ರಶ್ನಿಸಲಾಯಿತು. ಆದರೆ ಆತನ ಪಾತ್ರವಿರುವುದು ಖಚಿತವಾಗಿಲ್ಲ. ಈತನ ಜತೆಗೆ ಇತರೆ ಮೂವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೂರು ದಿನಗಳ ಹಿಂದೆ ನವೀನ್ ನನ್ನು ವಶಕ್ಕೆ ಪಡೆದ ಪೊಲೀಸರು, ಆತನ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ ಎನ್ನಲಾಗಿದೆ. ಆತನಿಂದ ವಿವಿಧ ಬಂದೂಕುಗಳ ಜೀವಂತ ಗುಂಡುಗಳು ಹಾಗೂ ಒಂದು ನಾಡಾ ಪಿಸ್ತೂಲ್‌ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಮದ್ದೂರು ತಾಲೂಕಿನ ಹಿಂದೂ ಜಾಗೃತಿ ವೇದಿಕೆ ಎಂಬ ಸಂಘಟನೆಯಲ್ಲಿ ಈತ ಸಕ್ರಿಯವಾಗಿದ್ದಾನೆ ಎಂಬ ವದಂತಿಗಳು ಹರಡಿದ್ದು, ಶೋಕಿಗಾಗಿ ಈತ ಕಳಪೆ ಮಟ್ಟದ ಬಂದೂಕು ಇಟ್ಟುಕೊಂಡಿದ್ದ. ಇದುವರೆಗೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಪತ್ತೆಯಾಗಿಲ್ಲ. ಈ ಎಲ್ಲಾ ಆಯಾಮದಲ್ಲೂ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ