ವಾಷಿಂಗ್ಟನ್, ಫೆ.23-ಭಯೋತ್ಪಾದನೆ ನಿಗ್ರಹಕ್ಕಾಗಿ ಪಾಕಿಸ್ತಾನ ಕೈಗೊಂಡಿರುವ ಕ್ರಮದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೃಪ್ತರಾಗಿಲ್ಲ ಎಂದು ತಿಳಿಸಿರುವ ಶ್ವೇತಭವನ, ಇದೇ ಮೊದಲ ಬಾರಿ ಪಾಕಿಸ್ತಾನವನ್ನು ಈ ಕ್ರಮಗಳಿಗೆ ಉತ್ತರದಾಯಿಯನ್ನಾಗಿ ಸಹ ಮಾಡಿದೆ.
ಭಯೋತ್ಪಾದನೆ ಮತ್ತು ಉಗ್ರಗಾಮಿಗಳ ದಮನ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಈ ಬಗ್ಗೆ ಅಧ್ಯಕ್ಷ ಟ್ರಂಪ್ಗೆ ಸಮಾಧಾನವಾಗಿಲ್ಲ ಎಂದು ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ರಾಜ್ ಶಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನದೊಂದಿಗೆ ನಮ್ಮ (ಅಮೆರಿಕ) ಸಂಬಂಧದಲ್ಲಿ ಸುಧಾರಣೆ ಆಗಬೇಕಾದರೆ, ಆ ದೇಶವು ಭಯೋತ್ಪಾದನೆ ದಮನ ಮಾಡಲು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಬೇಕು ಎಂದು ಅವರು ಹೇಳಿದ್ದಾರೆ.