ಭೋಪಾಲ್, ಫೆ.23- ಭಗ್ನ ಪ್ರೇಮಿಯೊಬ್ಬ ಪ್ರೀತಿಸಲು ನಿರಾಕರಿಸಿದ 11ನೆ ತರಗತಿ ವಿದ್ಯಾರ್ಥಿನಿಯ ತಲೆ ಕಡಿದು ಪರಾರಿಯಾಗಿರುವ ಅಮಾನುಷ ಘಟನೆ ಮಧ್ಯಪ್ರದೇಶದ ಅನೂಪ್ಪುರ್ ಸಮೀಪದ ಕೊಟ್ಮಾ ಗ್ರಾಮದ ಶಾಲೆಯೊಂದರ ಬಳಿ ನಿನ್ನೆ ನಡೆದಿದೆ.
ಪೂಜಾ ಪಣಿಕಾ ಬರ್ಬರ ಹತ್ಯೆಗೆ ಒಳಗಾದ ವಿದ್ಯಾರ್ಥಿನಿ. ಈ ಪ್ರಕರಣದ ಸಂಬಂಧ ದಿಲೀಪ್ ಸಾಹು ಎಂಬ ಯುವಕನನ್ನು ಬಂಧಿಸಲಾಗಿದೆ.
ಜೀವಶಾಸ್ತ್ರದ ಪ್ರಾಯೋಗಿಕ ತರಗತಿಯಲ್ಲಿ ಪಾಲ್ಗೊಳ್ಳಲು ಪೂಜಾ ನಿನ್ನೆ ಮಧ್ಯಾಹ್ನ 12.30ರ ಸಮಯದಲ್ಲಿ ಶಾಲೆಗೆ ತೆರಳುತ್ತಿದ್ದಾಗ ಆಕೆಯನ್ನು ಅಡ್ಡಗಟ್ಟಿದ ದಿಲೀಪ್ ಏಕಾಏಕಿ ಖಡ್ಗದಿಂದ ಆಕೆಯ ಕುತ್ತಿಗೆಗೆ ಮೂರು ಬಾರಿ ಹೊಡೆದು ತಲೆ ಕತ್ತರಿಸಿ ಮಾರಕಾಸ್ತ್ರವನ್ನು ಸ್ಥಳದಲ್ಲೇ ಬಿಸಾಡಿ ಪರಾರಿಯಾದ.
ಶಾಲೆಯ ನಿವೃತ್ತ ಶಿಕ್ಷಕರೊಬ್ಬರು ಈ ಭೀಕರ ಘಟನೆಯನ್ನು ನೋಡಿ ಕೂಗಿಕೊಂಡರು. ತಕ್ಷಣ ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸ್ಥಳಕ್ಕೆ ಧಾವಿಸಿದರು. ಸ್ಥಳದಲ್ಲೇ ಕೊಲೆಯಾದ ಪೂಜಾಳ ಶವ ಕಂಡು ಅವರೆಲ್ಲ ಬೆಚ್ಚಿಬಿದ್ಧರು.
ನಂತರ ಪೆÇಲೀಸರು ದಿಲೀಪ್ ಸಾಹುನನ್ನು ಬಂಧಿಸಿದರು. ಈತ ಕೆಲವು ದಿನಗಳಿಂದ ಪೂಜಾಳನ್ನು ಹಿಂಬಾಲಿಸಿ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದಾಗ. ಇತ್ತೀಚೆಗೆ ಆಕೆ ದಿಲೀಪ್ಗೆ ಛೀಮಾರಿ ಹಾಕಿದ್ದಳು. ಇದರಿಂದ ಕುಪಿತನಾದ ಆತ ಈ ಭೀಕರ ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.