ಉನ್ನಾವೊ, ಫೆ.23-ಯುವತಿಯೊಬ್ಬಳನ್ನು ದುಷ್ಕರ್ಮಿಗಳ ಗುಂಪೆÇಂದು ಬೆಂಕಿ ಹಚ್ಚು ಬೀಕರವಾಗಿ ಕೊಂದಿರುವ ಘಟನೆ ನಿನ್ನೆ ಸಂಜೆ ಉತ್ತರಪ್ರದೇಶದ ಉನ್ನಾವೊ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆಗೈದಿರುವ ಸಾಧ್ಯತೆ ಇದೆ.
ಗ್ರಾಮದ ಹೊರವಲಯದ ವಾರದ ಸಂತೆಗಾಗಿ ಬೈಸಿಕಲ್‍ನಲ್ಲಿ ತೆರಳುತ್ತಿದ್ದ 18 ವರ್ಷದ ಯುವತಿಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿ ಪರಾರಿಯಾಗಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಉತ್ತರಪ್ರದೇಶದ ರಾಜಧಾನಿ ಲಕ್ನೋದಿಂದ 100 ಕಿ.ಮೀ.ದೂರದಲ್ಲಿರುವ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹೊಲದ ಬಳಿ ಶೇಕಡ 100ರಷ್ಟು ಸುಟ್ಟು ಹೋಗಿರುವ ಶವ, ಸೈಕಲ್, ಚಪ್ಪಲಿಗಳು ಪತ್ತೆಯಾಗಿದೆ. ಕೃತ್ಯ ನಡೆದ ಸ್ಥಳದಲ್ಲಿ ಖಾಲಿ ಪೆಟ್ರೋಲ್ ಕ್ಯಾನ್ ಮತ್ತು ಬೆಂಕಿಪೆÇಟ್ಟಣದ ಕಡ್ಡಿಗಳು ಕಂಡುಬಂದಿವೆ.
ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಂತರ ಜೀವಂತ ದಹನ ಮಾಡಿರುವ ಸಾಧ್ಯತೆ ಇದ್ದು, ಮರಣೋತ್ತರ ಪರೀಕ್ಷೆ ನಂತರ ನಿಜಾಂಶ ತಿಳಿಯಲಿದೆ ಎಂದು ಪೆÇಲೀಸರು ಹೇಳಿದ್ದಾರೆ.
ಈ ಘಟನೆ ನಂತರ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನೆಲೆಸಿದ್ದು, ಪೆÇಲೀಸರು ವ್ಯಾಪಕ ಬಂದೋಬಸ್ತ್ ಮಾಡಿದ್ದಾರೆ.