ಇಲ್ಲೊಬ್ಬ ಮೊಟ್ಟೆ ಇಡುವ ಬಾಲಕ, ದಂಗು ಬಡಿದ ವೈದ್ಯರು ಹೇಳಿದ್ದೇನು?

ಬಾಲಿ: ದಕ್ಷಿಣ ಇಂಡೋನೇಷ್ಯಾದಲ್ಲಿ 14 ವರ್ಷದ ಬಾಲಕನೊಬ್ಬ ಮೊಟ್ಟೆ ಇಡುತ್ತಿದ್ದಾನೆ.ಇದನ್ನು ನೋಡಿದ ವೈದ್ಯರಿಗೂ ಕೂಡ ಅಚ್ಚರಿಯಾಗಿದೆ.

ಕಾರಣ, 14 ವರ್ಷದ ಬಾಲಕ ಅಕ್ಮಲ್ ಎಂಬಾತ ಕೋಳಿ ಮೊಟ್ಟೆಯ ಆಕಾರದಲ್ಲಿಯೇ ಗುದದ್ವಾದರ ಮೂಲಕ ಮೊಟ್ಟೆ ಇಡುತ್ತಿದ್ದಾನೆ. ಕಳೆದ ಎರಡು ವರ್ಷಗಳಿಂದ ಅಕ್ಮಲ್ ಸುಮಾರು 20 ಮೊಟ್ಟೆಗಳನ್ನು ಇಟ್ಟಿದ್ದಾನೆ. ಅಕ್ಮಲ್ ಇಟ್ಟಿರುವ ಮೊಟ್ಟೆ ಹಳದಿ ಇಲ್ಲವೇ ಬಿಳಿ ಬಣ್ಣದಾಗಿರುತ್ತವೆ ಎಂದು ಅವರ ತಂದೆ ಹೇಳಿದ್ದಾರೆ.

ಇದೀಗ ಆಸ್ಪತ್ರೆಯಲ್ಲಿ ಅಕ್ಮಲ್ ನನ್ನು ತಪಾಸಣೆಗೊಳಪಡಿಸಿದ್ದು, ಇದೇ ಸೋಮವಾರ ವೈದ್ಯರು ಮುಂದೆಯೇ ಮೊಟ್ಟೆಗಳನ್ನು ಇಟ್ಟಿದ್ದಾನೆ. ಇದರಿಂದ ವೈದ್ಯರಿಗೆ ದಂಗುಬಡಿದಂತಾಗಿದೆ.

ಮನುಷ್ಯ ಮೊಟ್ಟೆ ಇಡಲು ಸಾಧ್ಯವೇ ಇಲ್ಲ. ಅಕ್ಮಲ್ ತಾನೇ ಗುದದ್ವಾರದ ಮೂಲಕ ಹೊಟ್ಟೆಯೊಳಗೆ ಮೊಟ್ಟೆ ಸೇರಿಕೊಂಡಿರಬೇಕು ಎನ್ನುವುದು ನಮ್ಮ ಅನುಮಾನ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಅಕ್ಮಲ್ ಈ ಹೇಳಿಕೆಯನ್ನು ತಳ್ಳಿಹಾಕಿದ್ದಾನೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ