ನವದೆಹಲಿ, ಫೆ.22-ಖಲಿಸ್ತಾನ್ ಭಯೋತ್ಪಾದಕ ಜಸ್ಪ್ರೀತ್ ಅಟ್ವಲ್ ಇಂದು ತಮ್ಮ ಗೌರವಾರ್ಥ ಆಯೋಜಿಸಿರುವ ಔತಣ ಕೂಟದಲ್ಲಿ ಭಾಗವಹಿಸದಿರಲು ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡ್ಯು ಮತ್ತು ಅವರ ನಿಯೋಗ ನಿರ್ಧರಿಸಿದೆ.
ಈ ವಿಷಯವನ್ನು ಭಾರತದಲ್ಲಿರುವ ಕೆನಡಾ ಹೈ ಕಮಿಷನರ್ ನಾಡಿತ್ ಪಟೇಲ್ ಖಚಿತಪಡಿಸಿದ್ದಾರೆ.
1986ರಲ್ಲಿ ಕೆನಡಾದ ವ್ಯಾಂಕೋವರ್ನಲ್ಲಿ ಆಗಿನ ಪಂಜÁಬ್ ಸಚಿವ ಮಾಲ್ಕಿಯಾತ್ ಸಿಂಗ್ ಸಿದು ಅವರನ್ನು ಕೊಲ್ಲಲು ಜಸ್ಪ್ರೀತ್ ಯತ್ನಿಸಿದ್ದ. ಈ ಸಂಬಂಧ ಆತನನ್ನು ದೋಷಿಯನ್ನಾಗಿಸಿ ಶಿಕ್ಷೆ ವಿಧಿಸಲಾಗಿತ್ತು.
ಭಾರತ ಭೇಟಿಯಲ್ಲಿರುವ ಕೆನಡಾ ಪ್ರಧಾನಿ, ಅವರ ಪತ್ನಿ, ಮಕ್ಕಳು ಹಾಗೂ ಹಿರಿಯ ಸಚಿವರಿಗೆ ಜಸ್ಪ್ರೀತ್ ಇಂದು ದೆಹಲಿಯಲ್ಲಿ ಔತಣ ಕೂಟ ಆಯೋಜಿಸಿದ್ದರು.
ಆದರೆ ಜಸ್ಪೀತ್ ಜೊತೆ ಕಾರ್ಯಕ್ರಮವೊಂದರಲ್ಲಿ ಕೆನಡಾ ಪ್ರಧಾನಿ ಅವರ ಪತ್ನಿ ಇರುವ ಫೆÇೀಟೋಗಳು ಸಾಮಾಜಿಕ ಜÁಲತಾಣಗಳು ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗಿ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿಯೂ ಮುಜುಗರವಾಗುವುದನ್ನು ತಪ್ಪಿಸಲು ಭೋಜನಕೂಟದಲ್ಲಿ ಪಾಲ್ಗೊಳ್ಳದಿರಲು ಜಸ್ಟಿನ್ ಟ್ರುಡ್ಯೂ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.