ಕೆರೆಗಳ ಸಂಸ್ಕರಿತವಾಗದ ಕೊಳಚೆ ಪ್ರದೇಶವನ್ನು ತಡೆಯಲು ವ್ಯಾಪಕ ಯೋಜನೆ ಇಲ್ಲ

ಬೆಂಗಳೂರು, ಫೆ.22-ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಪುನರುಜ್ಜೀವನ ಸಂಸ್ಕರಿತವಾಗದ ಕೊಳಚೆ ಪ್ರದೇಶವನ್ನು ತಡೆಯಲು ವ್ಯಾಪಕ ಯೋಜನೆ ರೂಪಿಸಿರಲಿಲ್ಲ ಎಂದು 2017ನೆ ವರ್ಷದ ಆರ್ಥಿಕ ವಲಯಕ್ಕೆ ಸಂಬಂಧಿಸಿದ ಭಾರತದ ಲೆಕ್ಕ ನಿಯಂತ್ರಕರು ಹಾಗೂ ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಈ ವರದಿಯನ್ನು ಮಂಡಿಸಿದರು.

ಕೆರೆಗಳಿಗೆ ಸಂಸ್ಕರಿತವಾಗದ ಕೊಳಚೆ ಪ್ರದೇಶವನ್ನು ತಡೆಯಲು ಕ್ರಮ ತೆಗೆದುಕೊಳ್ಳಲಿಲ್ಲ ಮತ್ತು ಬೆಂಗಳೂರಿನ ಕೆರೆಗಳ ಮೇಲ್ವಿಚಾರಣೆಯಲ್ಲಿ ಕೊರತೆ ಇತ್ತು ಎಂದು ಇದರಲ್ಲಿ ಉಲ್ಲೇಖಿಸಿದೆ.

ರಾಜ್ಯದಲ್ಲಿ ಕೊಳಚೆ ಸಂಸ್ಕರಣಾ ಸ್ಥಾವರಗಳ ಅಗತ್ಯತೆಯನ್ನು ಮಂಡಳಿಯು ನಿಷ್ಕರ್ಷಿಸಿರಲಿಲ್ಲ. ಬೆಂಗಳೂರಿನಲ್ಲಿ ಸ್ಥಾಪಿತವಾದ 14 ಕೊಳಚೆ ಸಂಸ್ಕರಣಾ ಸ್ಥಾವ ರಗಳು ಕಡಿಮೆ ಸಾಮಥ್ರ್ಯ ಹೊಂದಿದ್ದವು. ಜೈವಿಕ ವೈದ್ಯಕೀಯ ತ್ಯಾಜ್ಯದ ಅವೈಜ್ಞಾನಿಕ ಮಾದರಿಯ ವಿಸರ್ಜನೆಯ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೈಗಾರಿಕಾ ಘಟಕಗಳ ಸ್ಥಾಪನೆಗಾಗಿ ಹಾಗೂ ಕಾರ್ಯಾಚರಣೆಗಾಗಿ ಸಮ್ಮತಿಯನ್ನು ಕಡ್ಡಾಯ ತನಿಖೆ ಮಾಡದೆಯೇ ನೀಡಲಾಗಿತ್ತು ಎಂದು ಹಲವು ಲೋಪಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ತನ್ನ ಕಾರ್ಯಾಚರಣೆಗಳನ್ನು ತರುವ ಮುನ್ನೋಟ ಯೋಜನೆ ಹೊಂದಿರಲಿಲ್ಲ. 2009-14 ಮತ್ತು 2014-19 ರ ಕೈಗಾರಿಕಾ ನೀತಿಗಳಂತೆ ಮಂಡಳಿಯು ಉದ್ದೇಶಗಳ ಜಾರಿಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿರಲಿಲ್ಲ. 1.15 ಲಕ್ಷ ಎಕರೆ ಭೂಮಿಗೆ ಪ್ರತಿಯಾಗಿ 50,887 ಎಕರೆ ಮಾತ್ರ ಅಧಿಸೂಚಿತವಾದರೆ ವಾಸ್ತವಿಕ ಸ್ವಾಧೀನತೆಯು ಕೇವಲ 21,486 ಎಕರೆ ಯಾಗಿತ್ತು. ಹೀಗಾಗಿ ಭೂ ಬ್ಯಾಂಕ್‍ನ ಸೃಷ್ಟಿಗಾಗಿ ಅಧಿಸೂಚನೆ ಮತ್ತು ಭೂ ಸ್ವಾಧೀನ ಪ್ರಕ್ರಿಯೆಯು ಯೋಜನಾ ರಹಿತವಾಗಿತ್ತು ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ