
ವಾಷಿಂಗ್ಟನ್, ಫೆ.22-ವಿಶ್ವವಿಖ್ಯಾತ ಫೋರ್ಡ್ ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷ ಮತ್ತು ಫೋರ್ಡ್ ನಾರ್ತ್ ಅಮೆರಿಕದ ಅಧ್ಯಕ್ಷ ಇಂಡೋ-ಅಮೆರಿಕನ್ ರಾಜ್ ನಾಯರ್(54) ಅವರನ್ನು ದುರ್ನಡನೆ ಆರೋಪದ ಮೇಲೆ ವಜಾಗೊಳಿಸಲಾಗಿದೆ.
ಕೆಲಸ ಮಾಡುವ ಸ್ಥಳದಲ್ಲಿ ಅಸಭ್ಯ ವರ್ತನೆ ಮತ್ತು ದುರ್ನಡನೆ ಹಿನ್ನೆಲೆಯಲ್ಲಿ ಡೆಟ್ರಾಯಿಟ್ ಮೂಲದ ಮೋಟಾರ್ ಕಂಪನಿಯ ಉನ್ನತ ಹುದ್ದೆಯಿಂದ ಅವರನ್ನು ತೆಗೆದು ಹಾಕಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ರಾಜ್ ನಾಯರ್ ಅವರ ವರ್ತನೆ ಮತ್ತು ನಡವಳಿಕೆಗಳು ಕಂಪನಿ ನಡವಳಿಕೆ ಸಂಹಿತೆಗೆ ಅನುಗುಣವಾಗಿಲ್ಲ. ನಮ್ಮ ಸಂಸ್ಥೆಯಲ್ಲಿ ಶಿಸ್ತು ಮತ್ತು ಬದ್ಧತೆ ಮುಖ್ಯ. ಹೀಗಾಗಿ ಅವರನ್ನು ತಕ್ಷಣದಿಂದ ಜÁರಿಗೆ ಬರುವಂತೆ ವಜÁಗೊಳಿಸಲಾಗಿದೆ ಎಂದು ಸಂಸ್ಥೆ ಹೇಳಿಕೆ ತಿಳಿಸಿದೆ.
ಫೋಟೋ ಕ್ರೆಡಿಟ್: businessveeru.com