ಬಾಗಲಕೋಟ,- ಶ್ರೀ ಗೌರಿಶಂಕರ ಬಿಲ್ವಾಶ್ರಮ ಶ್ರೀಮಠ ನೂತನ ಉತ್ತರಾಧಿಕಾರಿಯಾಗಿ ಕಂದಗಲ್ಲ ವರಕವಿಗಳಾದ ಪರ್ವತ ಶಾಸ್ತ್ರೀಯ ಮೊಮ್ಮಗ ವೇ.ಮೂ. ಶ್ರೀ ಶಾಸ್ತ್ರೀಗಳು ಹಾಗೂ ತಾಯಿ ಗಿರಿಜಾದೇವಿ ಇವರ ದ್ವೀತಿಯ ಸುಪುತ್ರ ನೇಮಕ ಮಾಡಲಾಗಿದೆ ಎಂದು ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಶ್ರೀಶೈಲ ಪೀಠ ಜಗದ್ಗುರು ತಿಳಿಸಿದ್ದರು.
ಮಂಗಳವಾರ ಶ್ರೀ ಗೌರಿಶಂಕರ ಬಿಲ್ವಾಶ್ರಮ ಬಾಗಲಕೋಟ ಜಿಲ್ಲೆ ತಾಲೂಕಿನ ಕಿರಸೂರ ಗ್ರಾಮದ ನೂತನ ಉತ್ತರಾಧಿಕಾರಿಯಾಗಿ ಮಾಡಲು ಕಿರಸೂರು ಗ್ರಾಮದ ಹಾಗೂ ಸುತ್ತಮುತ್ತಲಿನ ಭಕ್ತರ ಸದಿಚ್ಛೆಯಂತೆ ನೇಮಕ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷರು ಮಾಜಿ ಶಾಸಕರಾದ ಡಾ|| ವೀರಣ್ಣ ಚರಂತಿಮಠ ಮೊದಲಿನ ಶ್ರೀ ಗೌರಿಶಂಕರ ಶಿವಾಚಾರ್ಯ ಸ್ವಾಮಿಗಳು ಮಹಾತಪಸ್ವಿಗಳು ಅವರು ಆರ್ಯುವೇದಿಕ ವೈದ್ಯರು ಹೀಗಾಗಿ ಶ್ರೀಮಠಕ್ಕೆ ರಾಜ್ಯದ ಹೊರ ರಾಜ್ಯದ ಭಕ್ತರನ್ನು ಹೊಂದಿದೆ ಎಂದು ಹೇಳಿದರು.
ಇಂದು ನೇಮಕಗೊಂಡಿರುವ ಶ್ರೀಗಳ ಹಿಂದಿನ ಪೂಜ್ಯ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಬೇಕೆಂದು ಶ್ರೀಗಳಿಗೆ ನೆನಪಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಮುತ್ತತ್ತಿ ಶ್ರೀಗಳು, ಬಸವರಾಜ ಡುಗ್ಗಿ, ಬಸವರಾಜ ಅನಗವಾಡಿ, ಹುಚ್ಚಪ್ಪ ವಾಗಿನಗೇರಿ, ರಂಗಪ್ಪ ಕಟಗಿ, ಅಪ್ಪಣ್ಣ ವಡ್ರಕಲ್ಲ, ಇಸ್ಮಾಯಿಲ್ಸಾಬ, ಶಿವಾನಂದ ಮಲ್ಲಾಪೂರ ಶಿಕ್ಷಕರು, ಮುತ್ತಣ್ಣ ಕಪಲಿ, ಷಣ್ಮುಖಪ್ಪ ಅಂಗಡಿ, ಸಮೀತಿಯ ಮುಖಂಡರು, ಊರಿನ ಗುರು-ಹಿರಿಯರು, ಪ್ರಮುಖರು, ತಾಯಂದಿರು ಅನೇಕರು ಪಾಲ್ಗೊಂಡಿದ್ದರು. ಗುರುದೇವ ಶಾಸ್ತ್ರೀಗಳು ಸ್ವಾಗತಿಸಿದರು. ವಿರೇಶ ಹಿರೇಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.