ಬೆಂಗಳೂರು ಫೆ ೨೧ – ಕಳೆದ ಭಾನುವಾರ ನಡೆದ ವಿಶೇಷ ಸಭೆಯಲ್ಲಿ 80 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಆದ್ಯತೆ ನೀಡಲಾಗಿದೆ. ಮೊದಲ ಸಾಲಿನ ನಾಯಕರು ಮತ್ತು ಚುನಾವಣಾ ರೇಸ್ನಲ್ಲಿ ಮುಂದಿರುವ ಆಕಾಂಕ್ಷಿಗಳ್ಳನ್ನು ಆಯ್ಕೆ ಮಾಡಲಾಗಿದೆ. ಆದರೆ ಪ್ರಮುಖ ನಾಯಕರನ್ನು ಈ ಪಟ್ಟಿಯಲ್ಲೇ ಸೇರಿಸಬೇಕೆಂಬುದು ಒತ್ತಾಯ ವಾಗಿದೆ. ಹೀಗಾಗಿ ಕೆಲವೆಡೆ ಸೋರಿಕೆ ಆಗಿರುವಂಥ ಆಕಾಂಕ್ಷಿಗಳ ಪಟ್ಟಿಯಲ್ಲಿ ಮತ್ತಷ್ಟು ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಕೆ ಪಿ ಸಿ ಸಿ ಮೂಲಗಳು ತಿಳಿಸಿವೆ. ಹೀಗಾಗಿ ಕೆಲವೆಡೆ ಚರ್ಚೆಗೆ ಗ್ರಾಸವಾಗಿರುವ ಸೋರಿಕೆ ಪಟ್ಟಿಯನ್ನು ಇಲ್ಲಿ ಪ್ರಕಟಿಸಲಾಗಿಲ್ಲ. ಆದರೆ 24 ರಿಂದ ಆರಂಭವಾಗುವ ಏ ಐ ಸಿ ಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರವಾಸ ಸಂಧರ್ಭದಲ್ಲಿ ಈ ಪಟ್ಟಿ ಘೋಷಣೆ ಆಗಲಿದೆ.