
ಮೈಸೂರು, ಫೆ.21-ಕಾರಿನ ಗಾಜು ಒಡೆದು 2 ಲಕ್ಷ ರೂ. ಬೆಲೆಯ ಚಿನ್ನಾಭರಣ ದೋಚಿರುವ ಘಟನೆ ಸಯ್ಯಾಜಿರಾವ್ ರಸ್ತೆಯಲ್ಲಿ ನಡೆದಿದೆ.
ನಗರಕ್ಕೆ ಬಂದಿದ್ದ ಸೂಳ್ಯದ ರಾಜೇಶ್ ಕೇದಿಲಾಯಿ ಅವರು ಸಯ್ಯಾಜಿರಾವ್ ರಸ್ತೆಯ ಕಾವೇರಿ ಎಂಪೆÇೀರಿಯಂ ಬಳಿ ತಮ್ಮ ಕಾರನ್ನು ನಿಲ್ಲಿಸಿ ಅಂಗಡಿಗೆ ತೆರಳಿದ್ದರು. ಇವರು ಮತ್ತೆ ಹಿಂತಿರುಗುವಷ್ಟರಲ್ಲಿ ದುಷ್ಕರ್ಮಿಗಳು ಕಾರಿನ ಗಾಜು ಒಡೆದು ಸೂಟ್ಕೇಸ್ನಲ್ಲಿದ್ದ ಚಿನ್ನಾಭರಣ ಹಾಗೂ ಹೊಸ ಬಟ್ಟೆಗಳನ್ನು ಅಪಹರಿಸಿದ್ದಾರೆ.
ಈ ಬಗ್ಗೆ ರಾಜೇಶ್ ಅವರು ದೇವರಾಜ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.