
ನವದೆಹಲಿ: ಮೊಬೈಲ್ ಗ್ರಾಹಕರಿಗೆ ಆಘಾತಕಾರಿ ಸುದ್ದಿ. ಶೀಘ್ರದಲ್ಲೇ ಈಗಿರುವ 10 ಡಿಜಿಟ್ ನ ಮೊಬೈಲ್ ಸಂಖ್ಯೆ 13 ಡಿಜಿಟ್ ಆಗಿ ಬದಲಾಗಲಿದೆ. ಕಾರಣ ಜುಲೈ 1ರಿಂದ 13 ಡಿಜಿಟ್ ನಂಬರ್ ಗೆ ಬದಲಾವಣೆ ಮಾಡಬೇಕೆಂದು ಟೆಲಿಕಾಂ ಇಲಾಖೆ ಆದೇಶ ಹೊರಡಿಸಿದೆ.
ಜುಲೈ 1ರಿಂದ 13 ಡಿಜಿಟ್ ಮೊಬೈಲ್ ನಂಬರ್ ನೀಡುವಂತೆ ಟೆಲಿಕಾಂ ಸಂಸ್ಥೆಗಳಿಗೆ ಆದೇಶ ಹೊರಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮೊಬೈಲ್ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಅನ್ನು 13 ಡಿಜಿಟ್ ಗೆ ಬದಲಾಯಿಸಿಕೊಳ್ಳಬೇಕಿದೆ.
ಜುಲೈ 1ರಿಂದ 13 ಡಿಜಿಟ್ ಮೊಬೈಲ್ ನಂಬರ್ ಬಳಕೆಯಾಗಲಿದ್ದು 2018ರ ಡಿಸೆಂಬರ್ 31ರವರೆಗೆ ಮಾತ್ರ 10 ಡಿಜಿಟ್ ನಂಬರ್ ಬಳಕೆಯಲ್ಲಿದ್ದು ಅಷ್ಟರಲ್ಲಿ ಗ್ರಾಹಕರು ತಮ್ಮ ಸಿಮ್ ನಂಬರ್ ಅನ್ನು ಬದಲಾಯಿಸಿಕೊಳ್ಳಬೇಕಿದೆ.