ಕಾಶ್ಮೀರ ಕಣಿವೆಯಲ್ಲಿ ಒಂದೆಡೆ ಉಗ್ರರ ಉಪಟಳ, ಮತ್ತೊಂದೆಡೆ ಪಾಕಿಸ್ತಾನಿ ಯೋಧರ ಪುಂಡಾಟ

Kulgam: Soldiers during an operation launched after at least two Indian Army soldiers were killed and three wounded when militants attacked a military vehicle on the Jammu-Srinagar national highway in Kulgam district on June 3, 2017. (Photo: IANS)

ಜಮ್ಮು, ಫೆ.19-ಕಾಶ್ಮೀರ ಕಣಿವೆಯಲ್ಲಿ ಒಂದೆಡೆ ಉಗ್ರರ ಉಪಟಳ, ಮತ್ತೊಂದೆಡೆ ಪಾಕಿಸ್ತಾನಿ ಯೋಧರ ಪುಂಡಾಟ ಮುಂದುವರಿದಿದೆ. ಜಮ್ಮುವಿನ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ದಾಳಿ ನಡೆಸುವ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಮ್(ಬ್ಯಾಟ್) ಸೈನಿಕರ ಯತ್ನವನ್ನು ಭಾರತೀಯ ಭದ್ರತಾ ಪಡೆಗಳು ವಿಫಲಗೊಳಿಸಿವೆ.

ಈ ಕಾರ್ಯಾಚರಣೆಯಲ್ಲಿ ಬ್ಯಾಟ್ ಯೋಧನೊಬ್ಬ ಹತನಾಗಿದ್ದು, ನಾಲ್ಕು ರಾಕೆಟ್ ಪೆÇ್ರಪೆಲ್ಲೆಡ್ ಗ್ರೆನೇಡ್(ಆರ್‍ಪಿಜಿ) ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗುಂಡಿನ ಚಕಮಕಿ ವೇಳೆ ಭಾರತದ ಮೂವರ ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಎಲ್‍ಒಸಿಯಿಂದ 100 ಮೀಟರ್ ದೂರದಲ್ಲಿ, ಭಾರತೀಯ ಸೇನಾ ನೆಲೆ ಬಳಿ ಶಂಕಾಸ್ಪದ ಚಲನೆಯನ್ನು ಯೋಧರು ಗಮನಿಸಿದರು. ಇದೇ ಸಂದರ್ಭದಲ್ಲಿ ದಾಳಿ ನಡೆಸಲು ಯತ್ನಿಸಿದ ಬ್ಯಾಟ್ ಸೈನಿಕರು ಒಂದು ಆರ್‍ಪಿಜೆಯನ್ನು ಠಾಣೆ ಮೇಲೆ ಉಡಾಯಿಸಿದರು. ತಕ್ಷಣ ಎಚ್ಚೆತ್ತುಕೊಂಡು ದಿಟ್ಟ ಪ್ರತ್ಯುತ್ತರ ನೀಡಿದ ಯೋಧರು ನಡೆಸಿದ ಪ್ರತಿ ದಾಳಿಯಲ್ಲಿ ಪಾಕಿಸ್ತಾನದ ಯೋಧ ಹತನಾದ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ