ರಾಜ್ಯ ಸರ್ಕಾರ ಕ್ರೈಸ್ತರಿಗೆ ಮಲತಾಯಿ ಧೋರಣೆ ಮಾಡುತ್ತಿದೆ

ಬೆಂಗಳೂರು, ಫೆ.18-ಕ್ರೈಸ್ರ ಸಮುದಾಯಕ್ಕೆ 2018-19 ನೇ ಸಾಲಿನ ಬಜೆಟ ನಿರಾಶಾದಾಯಕವಾಗಿದ್ದು ರಾಜ್ಯ ಸರ್ಕಾರ ಕ್ರೈಸ್ತರಿಗೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ ರೈಟ್ಸ್‍ನ ರಾಜ್ಯಾಧ್ಯಕ್ಞ ರೆವರೆಂಡ್ ಬಿ. ರಾಜಶೀಖರ ಆರೋಪಿಸಿದರು.

ಸುದ್ದಿಗೊಷ್ಡಿಯಲ್ಲಿ ಮಾತನಾಡಿದ ಅವರು, ರಜ್ಯದ ಕ್ರೈಸ್ತರ ಅಭಿವೃದ್ದಿಗಾಗಿ ಕಳೆದ ವರ್ಷ ಬಜೆಟ್‍ನಲ್ಲಿ 175 ಕೋಟಿ ರೂ ಬಿಡುಗಡೆ ಮಾಡಲಾಗಿತು, ಆದರೆ ಈ ಸಾಲಿನ ಬಜೆಟ್‍ನಲ್ಲಿ 200 ಕೋಟಿ ಮಾತ್ರ ವಿಡುಗಡೆ ಮಾಡಲಾಗಿದ್ದು ಕೇವಲ 25 ಕೋಟಿ ರೂ ಮಾತ್ರ ಹೆಚ್ಚಿಸಿದ್ದಾರೆ. ಎಂದು ಆರೋಪಿಸಿದರು.

2011 ರ ಜನಗಣತಿಯ ಆಧಾರದ ಮೇಲೆ 40 ಲಕ್ಷಕ್ಕಿಂತ ಹೆಚ್ಚು ಜನರು ಕ್ರೈಸ್ತ ಸಮುದಾಯದವರು ರಾಜ್ಯದಲ್ಲಿ ಇದ್ದಾರೆ. ಶೇ 6 ರಷ್ಟು ಕ್ರೈಸ್ತ ಸಮುದಾಯವೇ ಇರುವುದರಿಂದ ಪ್ರಸಕ್ರ ಸಾಲಿಗೆ ಬಿಡುಗಡೆ ಮಾಡಿರುವ 200 ಕೋಟಿ ರೂ ಅನುದಾನವು ರಾಜ್ಯದಲ್ಲಿ ಕ್ರೈಸ್ತರ ಚರ್ಚ್ ದುರಸ್ಥಿಗಾಗಿ, ಸಮಾಧಿ ಕಾಂಪೌಂಡ್‍ಗಳಿಗೆ, ಸಮುದಾಯ ಭವನಗಳಿಗೆ, ಮಕ್ಕಳ ವಿದ್ಯಾಭ್ಯಾಸ ಸಾಲ ಸೌಲಭ್ಯಕ್ಕೆ ಸಾಕಾಗುತ್ತಿಲ್ಲ. ಎಂದು ದೂರಿದರು.
ರಾಜ್ಯಕ್ಕೆ ವಿದ್ಯೆ, ವೈದ್ಯ, ವೈಜ್ಞಾನಿಕ ರಂಗಗಳಲ್ಲಿ ಸಾಕಷ್ಡು ಕೊಡುಗೆ ನೀಡಿದ ಕ್ರೈಸ್ತರ ಅಭಿವೃದ್ದಿಗೆ ಹಿನ್ನಡೆ ಉಂಟಾಗಿದೆ ಎಂದು ತಿಳಿಸಿದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ