
ರೇವಾ:ಫೆ-18: ಮಧ್ಯಪ್ರದೇಶದ ರೇವಾ ಜಿಲ್ಲೆಯ ಶಾಲೆಯೊಂದರ ಶೌಚಾಲಯವನ್ನು ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ಬರಿಗೈಯಿಂದ ಶುಚಿಗೊಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗಿದೆ.
ರೇವಾದ ಖಜುಹ ಹಳ್ಳಿಯ ಶಾಲಾ ಶೌಚಾಲಯವನ್ನು ಶುಚಿಗೊಳಿಸಿರುವ ಮಿಶ್ರಾ ಅವರ ವೀಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ಶೇರ್ ಮಾಡಿದೆ. ಮಿಶ್ರಾ ಅವರು ಯಾವುದೇ ಸಲಕರಣೆ ಬಳಸದೇ ಬರಿಗೈಯಿಂದ ಶೌಚಾಲಯ ಶುಚಿಗೊಳಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಕಳೆದ ಹಲವು ದಿನಗಳಿಂದ ಈ ಶೌಚಾಲಯ ದುಸ್ಥಿತಿಯಲ್ಲಿತ್ತು ಎಂದು ಹೇಲಲಾಗಿದೆ.
ಮಿಶ್ರಾ ಅವರ ಈ ವೀಡಿಯೋಗೆ 1600 ರಿಟ್ವೀಟ್ಗಳು ಬಂದಿದ್ದು, 3 ಸಾವಿರಕ್ಕೂ ಅಧಿಕ ಲೈಕ್ಗಳನ್ನು ಪಡೆದಿದೆ. ಸಂಸದರ ಈ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾದೆ.