ನವದೆಹಲಿ:ಫೆ-18: ಮೈಸೂರು, ಕೊಚ್ಚಿ, ಜೈಪುರ, ಭುವನೇಶ್ವರ ಮತ್ತು ಶಿಮ್ಲಾದಲ್ಲಿ ಏಕಕಾಲಕ್ಕೆ ಹೊಸ 10 ರೂ ಪ್ಲಾಸ್ಟಿಕ್ ನೋಟು ಶ್ರೀಘ್ರದಲ್ಲಿ ಪ್ರಾಯೋಗಿಕವಾಗಿ ಚಲಾವಣೆಗೆ ಬರಲಿದೆ.
ಈ ಕುರಿತು ಕೇಂದ್ರ ಸರ್ಕಾರ ಈಗಾಗಲೆ ಆರ್ ಬಿ ಐ ಗೆ ತಿಳಿಸಿದ್ದು, ಪ್ಲಾಸ್ಟಿಕ್ ನೋಟುಗಳ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದೆ. ಇದೇ ಬೇಸಿಗೆಯಲ್ಲಿ ನೋಟುಗಳು ಚಲಾವಣೆಗೆ ಬರುವ ಸಾಧ್ಯತೆ ಇದೆ.
ಆರ್‌ಬಿಐ ಈಗಾಗಲೇ ನೋಟುಗಳ ತಯಾರಿಕೆಗೆ ಅಗತ್ಯವಾದ ಪ್ಲಾಸ್ಟಿಕ್ ಪಾಲಿಮರ್ ಖರೀದಿಸುತ್ತಿದೆ. ಕಾಗದದ ನೋಟುಗಳಿಗೆ ಹೋಲಿಸಿದರೆ ಪ್ಲಾಸ್ಟಿಕ್ ನೋಟುಗಳು ಎರಡೂವರೆ ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಮುದ್ರಣ ವೆಚ್ಚ ಮತ್ತು ಕಾಗದ ಉಳಿತಾಯವಾಗಲಿದೆ.
ಈ ಪ್ಲಾಸ್ಟಿಕ್ ನೋಟುಗಳಲ್ಲಿ ಹೆಚ್ಚು ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದ್ದು, ನಕಲಿ ನೋಟು ಹಾವಳಿಗೆ ಕಡಿವಾಣ ಬೀಳಲಿದೆ ಎಂಬುದ್ ಸರ್ಕಾರದ ಉದ್ದೇಶ. ಈ ಪ್ರಯೋಗ ಯಶಸ್ವಿಯಾದರೆ ದೇಶದಾದ್ಯಂತ ಪ್ಲಾಸ್ಟಿಕ್ ನೋಟುಗಳ ಚಲಾವಣೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.