ಪೋಲೀಸ್ ಕಾನ್ಸ್‍ಟೆಬಲ್,ವಾರ್ಡರ್ ಮತ್ತು ಜೈಲರ್ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆ

ಬೆಂಗಳೂರು, ಫೆ.17-ಪೋಲೀಸ್ ಕಾನ್ಸ್‍ಟೆಬಲ್ (ಕೆಎಸ್‍ಐಎಸ್‍ಎಫ್) ವಾರ್ಡರ್ ಮತ್ತು ಜೈಲರ್ ಹುದ್ದೆಗಳ ಭರ್ತಿಯ ಸಂಬಂಧ ನಾಳೆ ಲಿಖಿತ ಪರೀಕ್ಷೆ ನಡೆಯಲಿದೆ.

ವಾರ್ಡರ್ ಹುದ್ದೆಗೆ ಸುಮಾರು 24,960 ಅಭ್ಯರ್ಥಿಗಳಿಗೆ (ಸಮಯ ಬೆಳಗ್ಗೆ 9.30 ರಿಂದ 11ರ ವರೆಗೆ), ಜೈಲರ್ ಹುದ್ದೆಗೆ ಸುಮಾರು 8480 ಅಭ್ಯರ್ಥಿಗಳಿಗೆ (ಸಮಯ ಮಧ್ಯಾಹ್ನ 12 ರಿಂದ 1.30ರ ವರೆಗೆ) ಮ ತ್ತು ಪೆÇಲೀಸ್ ಕಾನ್ಸ್‍ಟೆಬಲ್ ಕೆಎಸ್‍ಐಎಸ್‍ಎಫ್ ಹುದ್ದೆಗೆ ಸುಮಾರು 10,220 ಅಭ್ಯರ್ಥಿಗಳಿಗೆ (ಸಮಯ ಮಧ್ಯಾಹ್ನ 3 ರಿಂದ 5ರ ವರೆಗೆ) ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ.

ಈಗಾಗಲೇ ಅಭ್ಯರ್ಥಿಗಳಿಗೆ ಮಾಹಿತಿಯನ್ನು ಇಲಾಖಾ ವೆಬ್‍ಸೈಟ್ ಡಿಡಿಡಿ.hom.ಜಟq.ಜ್ಞಿನಲ್ಲಿ ಬಿಡುಗಡೆ ಮಾಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಕರಪತ್ರವನ್ನು ಮೇಲ್ಕಂಡ ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಸರಿಯಾದ ಸಮಯಕ್ಕೆ ಸೂಚಿಸಿದ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಈ ಮೂಲಕ ತಿಳಿಯಪಡಿಸಲಾಗಿದೆ.

ಹೆಚ್ಚಿನ ಮಾಹಿತಿಯನ್ನು ಸದರಿ ವೆಬ್‍ಸೈಟ್‍ನಲ್ಲಿ ವೀಕ್ಷಿಸಬಹುದಾಗಿದೆ ಎಂದು ನಗರ ಪೋಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.

 

(ಪ್ರಾತಿನಿಧ್ಯಕ್ಕಾಗಿ ಮಾತ್ರ ಪೋಸ್ಟ್ ಮಾಡಲಾದ ಫೋಟೋ, ಮೂಲವಲ್ಲ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ