ಶ್ರವಣಬೆಳಗೊಳ:ಫೆ-17: ಶ್ರವಣಬೆಳಗೊಳದಲ್ಲಿರುವ ಭಗವಾನ್ ಬಾಹುಬಲಿಗೆ 88 ನೇ ಮಹಾಮಸ್ತಕಾಭಿಷೇಕ ಜಲಾಭಿಷೇಕದಿಂದ ಆರಂಭವಾಗಿದೆ.
ಶತಮಾನದ 2ನೇ ಮಹೋತ್ಸವಕ್ಕೆ ಸಾಕ್ಷಿಯಾಗಿರುವ ಗೊಮ್ಮಟಗಿರಿಯಲ್ಲಿನ ವಿರಾಗಿಗೆ ವರ್ಧಮಾನ ಸಾಗರ್ ಮುನಿ ಅವರು ಮೊದಲ ಜಲಾಭಿಷೇಕವನ್ನು ಮಾಡಿದರು. ಇದೇವೇಳೆ ಜೈನ ಮಹಾಮುನಿಗಳು, ಆಚಾರ್ಯರು ಮತ್ತು ಗಣ್ಯರು ಜಲಾಭಿಷೇಕ ಮಾಡುವ ಮೂಲಕ ವಿಧಿ ವಿಧಾನಗಳನ್ನು ಆರಂಭಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿ ಬಾಹುಬಲಿ ಮೂರ್ತಿಗೆ ಜಲಾಭಿಷೇಕ ನಡೆಸಿದರು. ಈ ವೇಳೆ ವೇಳೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ , ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಸಚಿವರಾದ ಎ.ಮಂಜು, ಉಮಾಶ್ರೀ ಮೊದಲಾದವರು ಪಾಲ್ಗೊಂಡಿದ್ದರು.
ದೇಶದ ವಿವಿಧೆಡೆಯಿಂದ ಆಗಮಿಸಿರುವ ಸಾವಿರಾರು ಭಕ್ತರು ವೈರಾಗ್ಯಮೂರ್ತಿಯ ಮಹಾ ಮಜ್ಜನಕ್ಕೆ ಸಾಕ್ಷಿಯಾಗಿದ್ದು, ಭಗವಾನ್ ಬಾಹುಬಲಿ ಕೀ ಜೈ ಎಂಬ ಘೋಷ ಬೆಳಗೊಳದಲ್ಲಿ ಮೊಳಗಿದೆ.
Mahamastakabhisheka,Bhagavan Bahubali,Shravana Belagola