ಬೆಂಗಳೂರು, ಫೆ.17- ನಗರದ ಪರಿಸರ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಚಾರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಎಲೆಕ್ಟ್ರಿಕ್ ವಾಹನಗಳಿಗೆ ವಿಧಾನಸೌಧದ ಮುಂದೆ ಚಾಲನೆ ನೀಡಿದರು.
ವಿದ್ಯುತ್ಚಾಲಿತ ಬಸ್, ಆಟೋರಿಕ್ಷಾ, ದ್ವಿಚಕ್ರ ವಾಹನಗಳನ್ನು ಮಹೇಂದ್ರ ಕಂಪೆನಿ ತಯಾರಿಸಿದ್ದು, ಭಗೀರಥಿ ಟ್ರಾವೆಲ್ಸ್ ಈ ವಾಹನಗಳನ್ನು ಖರೀದಿಸಿ ಸಂಚಾರಕ್ಕೆ ಬಿಟ್ಟಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಎಲೆಕ್ಟ್ರಿಕ್ ವಾಹನಗಳಲ್ಲಿ 9 ಮಂದಿ ಮಹಿಳಾ ಚಾಲಕರಿರುವುದು ವಿಶೇಷವಾಗಿದೆ. ಭಗೀರಥ ಸಂಸ್ಥೆ ವಾಹನಗಳಲ್ಲಿ ನಗರದ 10 ಕಡೆಗಳಲ್ಲಿ ಮಧ್ಯಾಹ್ನ 2ರಿಂದ ಸಂಜೆ 5 ಗಂಟೆವರೆಗೆ ಮೂರ್ನಾಲ್ಕು ಕಿ.ಮೀ. ಉಚಿತ ಪ್ರಯಾಣ ಮಾಡುವ ಸೌಲಭ್ಯವನ್ನು ಕಲ್ಪಿಸಿದೆ.
ವಿದ್ಯುತ್ ಚಾಲಿತ ವಾಹನಗಳಲ್ಲಿ ಸಂಚರಿಸುವುದನ್ನು ಪೆÇ್ರೀ ಮತ್ತು ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ಇ-ಮೊಬೆಲಿಟಿ ಅವೇರ್ನೆಸ್ ಕ್ಯಾಂಪೇನ್ಗೆ ಚಾಲನೆ ನೀಡಿದೆ.
ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಪ್ರಮಾಣ ಹೆಚ್ಚಾಗುತ್ತಿದೆ. 2010ರಲ್ಲಿ ವಿರಳವಾಗಿದ್ದ ಈ ವಾಹನಗಳು 2015ರ ವೇಳೆಗೆ 5ಲಕ್ಷಕ್ಕೇರಿವೆ. 2016ರ ಕೊನೆಯಹೊತ್ತಿಗೆ ಏಳೂವರೆ ಲಕ್ಷಗಳಾಗಿದ್ದು, 2017ರ ಜನವರಿ ವೇಳೆಗೆ 1 ಲಕ್ಷ ದಾಟಿವೆ.
ಟೆಸ್ಲಾ ಕಂಪೆನಿಯೊಂದೇ 2017ರ ಜನವರಿಯಿಂದ ಸೆಪ್ಟೆಂಬರ್ವರೆಗೆ 4.69 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿದೆ. ಪರಿಸರ ರಕ್ಷಣೆ ದೃಷ್ಟಿಯಿಂದ ಎಲೆಕ್ಟ್ರಿಕ್ ವಾಹನಗಳಿಗೆ ಕೇಂದ್ರ ಸರ್ಕಾರ ಬಹಳಷ್ಟು ಸಬ್ಸಿಡಿ ನೀಡುತ್ತಿದೆ. ವಿದ್ಯುತ್ ಚಾಲಿತ ಬಸ್ಗೆ 75ರಿಂದ ಒಂದು ಕೋಟಿ ವರೆಗೆ, ಟ್ಯಾಕ್ಸಿಗೆ ಒಟ್ಟಾರೆ ಬೆಲೆಯಲ್ಲಿ ಶೇ.10ರಿಂದ 15ರಷ್ಟು ಅಂದರೆ 1.24 ಲಕ್ಷ, ಆಟೋ ರಿಕ್ಷಾಗೆ ಒಟ್ಟು ಬೆಲೆಯ ಶೇ.20ರಷ್ಟು ಅಂದರೆ 37ರಿಂದ 61 ಸಾವಿರದೊವರೆಗೆ ಸಹಾಯಧನ ನೀಡುತ್ತಿದೆ.
ಭಗೀರಥ ಟ್ರಾವೆಲ್ಸ್ 130 ಒಟ್ಟು ಬಂಡವಾಳ ಹೂಡಿಕೆ ಮಾಡಿದ್ದು, ಒಂದು ಸಾವಿರ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸಲು ಮುಂದಾಗಿದೆ. ಮೊದಲ ಹಂತದಲ್ಲಿ 50 ವಾಹನಗಳನ್ನು ಖರೀದಿಸಿ ಸಂಚಾರಕ್ಕೆ ಬಿಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅವುಗಳಿಗೆ ಚಾಲನೆ ನೀಡಿದರು.
ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆ ವಿದ್ಯುತ್ ಚಾಲಿತ ವಾಹನಗಳ ಪ್ರದರ್ಶನಕ್ಕೆ ಮುಂದಾಗಿದೆ. ಬಿಎಂಟಿಸಿ ವತಿಯಿಂದ 150 ಬಸ್ಗಳು ಪ್ರದರ್ಶನಕ್ಕೆ ಸಿದ್ಧವಾಗುತ್ತವೆ.
ಕಾರ್ಯಕ್ರಮದಲ್ಲಿ ಭಗೀರಥ ಗ್ರೂಪ್ನ ಅಧ್ಯಕ್ಷ ಮಹೇಶ್ ಹರಿಹರನ್, ಮಹೇಂದ್ರ ಕಂಪೆನಿ ಸಿಇಒ ಮಹೇಶ್ ಬಾಬು ಮತ್ತಿತರರು ಭಾಗವಹಿಸಿದ್ದರು.
ಇದೇ ವೇಳೆ ವಿದ್ಯುತ್ ಚಾಲಿತ ವಾಹನಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಲ್ಪ ದೂರ ಈ ವಾಹನಗಳಲ್ಲಿ ಚಾಲನೆ ಮಾಡಿದರು.
(ಪ್ರಾತಿನಿಧ್ಯಕ್ಕಾಗಿ ಮಾತ್ರ ಪೋಸ್ಟ್ ಮಾಡಲಾದ ಫೋಟೋ, ಮೂಲವಲ್ಲ)