ಮಾಯಾವತಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಖಾಸಗಿ ಹೊಟೇಲ್‍ನಲ್ಲಿಂದು ಮಹತ್ವದ ಮಾತುಕತೆ

New Delhi: BSP chief Mayawati addressing media in Parliament in New Delhi on Tuesday. PTI Photo by Subhav Shukla(PTI7_18_2017_000016B)

ಬೆಂಗಳೂರು, ಫೆ.17- ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಎಸ್‍ಪಿ ರಾಷ್ಟ್ರೀಯ ವರಿಷ್ಠರಾದ ಮಾಯಾವತಿ ಹಾಗೂ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಖಾಸಗಿ ಹೊಟೇಲ್‍ನಲ್ಲಿಂದು ಮಹತ್ವದ ಮಾತುಕತೆ ನಡೆಸಿದರು.

ನಗರದ ಹೊರವಲಯ ಯಲಹಂಕದಲ್ಲಿ ಇಂದು ಜೆಡಿಎಸ್ ಪಕ್ಷ ಏರ್ಪಡಿಸಿದ್ದ ವಿಕಾಸಪರ್ವ ಸಮಾವೇಶಕ್ಕೂ ಮುನ್ನ ಮಾಯಾವತಿ ಅವರೊಂದಿಗೆ ದೇವೇಗೌಡರು ಪ್ರಸ್ತುತ ರಾಜಕಾರಣ, ಚುನಾವಣಾ ಪೂರ್ವ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಿದರು.

ಯುಪಿಯಿಂದ ನಗರಕ್ಕೆ ಆಗಮಿಸಿದ ಮಾಯಾವತಿ ಅವರನ್ನು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಆಲಿ ಅವರನ್ನು ಬರಮಾಡಿಕೊಂಡರು.
ಖಾಸಗಿ ಹೊಟೇಲ್‍ಗೆ ತೆರಳಿದ ಅವರೊಂದಿಗೆ ದೇವೇಗೌಡರು ಕೆಲಕಾಲ ಮಾತುಕತೆ ನಡೆಸಿದರು.

ಬಿಎಸ್‍ಪಿಗೆ ಚುನಾವಣೆಯಲ್ಲಿ ಕೆಲವು ಸೀಟುಗಳನ್ನು ಬಿಟ್ಟುಕೊಡುವುದು, ಚುನಾವಣೆಯಲ್ಲಿ ಬಿಎಸ್‍ಪಿ ಜತೆ ಮೈತ್ರಿ, ಚುನಾವಣಾ ರಣನೀತಿಗಳ ಬಗ್ಗೆ ಗೌಡರು ಮಾತುಕತೆ ನಡೆಸಿದರು.

ನಂತರ ನಡೆಯಲಿರುವ ಬಹಿರಂಗ ಸಭೆಯಲ್ಲಿ ಇಬ್ಬರೂ ನಾಯಕರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ, ಎರಡೂ ಪಕ್ಷಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ