![building-demolitions-sample](http://kannada.vartamitra.com/wp-content/uploads/2018/02/building-demolitions-sample-678x366.jpg)
ಬಳ್ಳಾರಿ, ಫೆ.17- ಇಂದು ಬೆಳಗ್ಗೆ ನಗರದ ಇಂದಿರಾ ಸರ್ಕಲ್ನ ಆಸುಪಾಸಿನಲ್ಲಿ ಪಾಲಿಕೆ, ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಸಿಬ್ಬಂದಿಗಳು ರಸ್ತೆ ವಿಸ್ತರಣೆಗಾಗಿ ಕೆಲವು ಕಟ್ಟಡಗಳನ್ನು ಕೆಡವಿದ್ದಾರೆ.
ರಸ್ತೆಗೆ ಅಡ್ಡಲಾಗಿದ್ದ, ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದ್ದ ಕೆಲ ತಡೆಗೋಡೆಗಳನ್ನೂ ಕೂಡ ನೆಲಸಮಗೊಳಿಸಲಾಗಿದೆ.
ಕಳೆದ ಒಂದೂವರೆ ತಿಂಗಳಿಂದ ಸಿಗ್ನಲ್ ದೀಪಗಳನ್ನು ಹಾಕಿ ವಾಹನ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಕಟ್ಟಡ ಮಾಲೀಕರಿಗೆ ನೋಟೀಸ್ ನೀಡಲಾಗಿದ್ದು, ಅದರಂತೆ ಇಂದು ನಾಲ್ಕು ಜೆಸಿಬಿಗಳು, 50ಕ್ಕೂ ಹೆಚ್ಚು ಸಿಬ್ಬಂದಿಗಳು ಪೋಲೀಸ್ರ ಸಹಕಾರದಲ್ಲಿ ಈ ಕರ್ಯಾಚರಣೆ ನಡೆಸಿದ್ದಾರೆ.
ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.