ಅಲ್‍ಖೈದಾ ಉಗ್ರಗಾಮಿ ಇಬ್ರಾಹಿಂ ಸುಲೇಮಾನ್ ಆದ್ನಾನ್ ಆಡಂ ಹರೂನ್‍ಗೆ ಅಮೆರಿಕ ನ್ಯಾಯಾಲಯ ಜೀವಾವಧಿ ಶಿಕ್ಷೆ

ವಾಷಿಂಗ್ಟನ್, ಫೆ.17- ಒಸಾಮಾ ಬಿನ್ ಲಾಡೆನ್ ನಾಯಕತ್ವದ ಅಲ್‍ಖೈದಾ ಉಗ್ರಗಾಮಿ ಸಂಘಟನೆಯ ಭಯೋತ್ಪಾದಕ ಇಬ್ರಾಹಿಂ ಸುಲೇಮಾನ್ ಆದ್ನಾನ್ ಆಡಂ ಹರೂನ್‍ಗೆ ಅಮೆರಿಕ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಆಫ್ಘಾನಿಸ್ಥಾನದಲ್ಲಿ ಅಮೆರಿಕ ಸೇನಾ ಯೋಧನ ಹತ್ಯೆ ಹಾಗೂ ನೈಜೀರಿಯಾದ ಯುಎಸ್‍ಎ ರಾಯಭಾರಿ ಕಚೇರಿ ಮೇಲೆ ಬಾಂಬ್ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಹರೂನ್ ಭಾಗಿಯಾಗಿದ್ದ ಎಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಹರೂನ್ ವಿರುದ್ಧದ ಆರೋಪ ಕುರಿತಂತೆ ರಚಿಸಲಾಗಿದ್ದ ಜೂರಿ ಸಮಿತಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲು ತೀರ್ಮಾನಿಸಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.

ಅಮೆರಿಕ ಮೇಲಿನ ಸೆ.11ರ ದಾಳಿಗೆ ಒಂದು ವಾರದ ಮೊದಲು ಹರೂನ್ ಒಸಾಮಾ ಬಿನ್ ಲಾಡೆನ್ ನೇತೃತ್ವದ ಅಲ್‍ಖೈದಾ ಸಂಘಟನೆಗೆ ಸೇರ್ಪಡೆಗೊಂಡಿದ್ದು, ನಂತರ ವಿಶ್ವದಾದ್ಯಂತ ನಡೆದ ಹಲವಾರು ದುಷ್ಕøತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಕಮಿಷನರ್ ಜೇಮ್ಸ್ ಪಿ.ಒ.ನೀಲ್ ತಿಳಿಸಿದ್ದಾರೆ.

ಅಬ್ದುಲ್ ಹಾದಿಹಲ್ ಇರಾಕಿ ನೇತೃತ್ವದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದ್ದ ಹರೂನ್ ಆತನ ಆದೇಶದ ಮೇರೆಗೆ ಪಾಕಿಸ್ತಾನದ ಗುಡ್ಡಗಾಡು ಪ್ರದೇಶದಲ್ಲಿ ಅಲ್ಲಿನ ಬುಡಕಟ್ಟು ಜನಾಂಗದ ಯುವಕರಿಗೆ ಉಗ್ರ ತರಬೇತಿ ನೀಡುತ್ತಿದ್ದ ಆರೋಪಕ್ಕೆ ಗುರಿಯಾಗಿದ್ದಾನೆ.

 

(ಪ್ರಾತಿನಿಧ್ಯಕ್ಕಾಗಿ ಮಾತ್ರ ಪೋಸ್ಟ್ ಮಾಡಲಾದ ಫೋಟೋ, ಮೂಲವಲ್ಲ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ