
ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ನಲ್ಲಿ ಮಾಜಿ ಸಚಿವರಾದ ಶ್ರೀ ನಾರಾಯಣಸ್ವಾಮಿಯವರು ಆಯೋಜಿಸಿದ್ದ ನವಚೈತನ್ಯಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಇನ್ನು 2 ತಿಂಗಳಲ್ಲಿ ಚುನಾವಣೆ ಘೋಷಣೆಯಾಗಲಿದ್ದು ಕಾರ್ಯಕರ್ತರು ಹೆಚ್ಚಿನ ಶ್ರಮದಿಂದ ಪಕ್ಷಸಂಘಟನೆ ಮಾಡಬೇಕೆಂದು ಕರೆನೀಡಿದರು. ಕೇಂದ್ರ ಸರ್ಕಾರದ ಸಾಧನೆಗಳು, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಸಮಾಜದ ಪ್ರತಿಯೊಬರಿಗೂ ತಲುಪಿಸುವ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಿ ಪ್ರಯತ್ನಿಸಬೇಕೆಂದು ಅವರು ಹೇಳಿದರು. ಮುಖಂಡರುಗಳಾದ ಶ್ರೀ ಆರ್.ಅಶೋಕ್, ಕು. ಶೋಭ ಕರಂದ್ಲಾಜೆ, ಶ್ರೀ ಸಿ.ಪಿ.ಯೋಗೇಶ್ವರ್, ಶ್ರೀ ನಾರಾಯಣ ಸ್ವಾಮಿ, ಶ್ರೀ ನರೇಂದ್ರ ಬಾಬು ಮುಂತಾದವರು ಸಮಾವೇಶದಲ್ಲಿ ಭಾಗವಹಿಸಿದ್ದರು.