ಮೈಸೂರು, ಫೆ.16- ಮೊದಲನೆ ಪತ್ನಿ ಇದ್ದರೂ ಅಪ್ರಾಪ್ತೆ ಬಾಲಕಿಯನ್ನು ಮದುವೆಯಾದ ಭೂಪ ಇದೀಗ ತಲೆಮರೆಸಿಕೊಂಡಿದ್ದಾನೆ.
ಜಿಲ್ಲೆಯ ಎಚ್‍ಡಿ ಕೋಟೆ ತಾಲೂಕಿನ ಕೆ.ಬೆಳತೂರು ಗ್ರಾಮದ ನಿವಾಸಿ ನಾಗರಾಜು ಎಂಬಾತ ಎರಡು ವರ್ಷದ ಹಿಂದೆ ಮೊದಲ ಪತ್ನಿ ಜತೆ ಜಗಳವಾಡಿ ತವರು ಮನೆಗೆ ಕಳುಹಿಸಿದ್ದನು.
ಅಂದಿನಿಂದ ಮೊದಲ ಪತ್ನಿ ಮರಳಿ ಬಂದಿರಲಿಲ್ಲ. ಕೆಲದಿನಗಳ ಹಿಂದೆ ಅಪ್ರಾಪ್ತೆಯನ್ನು ನಾಗರಾಜ ಶ್ರೀರಂಗಪಟ್ಟಣ ದೇವಸ್ಥಾನದಲ್ಲಿ ವಿವಾಹವಾಗಿದ್ದಾನೆ.
ಈ ವಿಷಯ ತಿಳಿದ ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿಗಳು ಗ್ರಾಮಕ್ಕೆ ತೆರಳುತ್ತಿದ್ದಂತೆ ನಾಗರಾಜು ತಲೆಮರೆಸಿಕೊಂಡಿದ್ದು, ಅಪ್ರಾಪ್ತೆಯನ್ನು ರಕ್ಷಿಸಿದ್ದಾರೆ.
ಈ ಬಗ್ಗೆ ಎಚ್‍ಡಿ ಕೋಟೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
(ಪ್ರಾತಿನಿಧ್ಯಕ್ಕಾಗಿ ಮಾತ್ರ ಪೋಸ್ಟ್ ಮಾಡಲಾದ ಫೋಟೋ, ಮೂಲವಲ್ಲ)