ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ತಮ್ಮ 41ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡರು

ಬೆಂಗಳೂರು, ಫೆ.16-ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ತಮ್ಮ 41ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡರು.

ರಾತ್ರಿಯಿಂದಲೇ ದರ್ಶನ್ ಅಭಿಮಾನಿಗಳು ಮನೆ ಮುಂದೆ ಜಮಾಯಿಸಿ ಮನೆ ಸುತ್ತಲೂ ಬಂಟಿಂಗ್ಸ್, ಪೆÇೀಸ್ಟರ್‍ಗಳನ್ನು ಹಾಕಿ ಮನೆಯನ್ನು ಹೂವಿನಿಂದ ಅಲಂಕಾರ ಮಾಡಿ ತಮ್ಮ ಅಚ್ಚುಮೆಚ್ಚಿನ ನಟನಿಗೆ ಶುಭಾಶಯ ಕೋರಲು ಕಾತುರದಿಂದ ಕಾಯ್ದಿದ್ದು, ಕೇಕ್ ಕತ್ತರಿಸುವ ಮುಖಾಂತರ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

ಮೆಜೆಸ್ಟಿಕ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ದಚ್ಚು ದಾಸ, ಅಂಬರೀಷ, ಕರಿಯ, ಬಾಸ್, ಸಂಗೊಳ್ಳಿ ರಾಯಣ್ಣ, ತಾರಕ್, ದರ್ಶನ್, ಲಂಕೇಶ್ ಪತ್ರಿಕೆ, ಧರ್ಮ, ಐರಾವತ, ಕಲಾಸಿಪಾಳ್ಯ, ಭಗವಾನ್ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನೀಡಿ ಜನರ ಅಚ್ಚು ಮೆಚ್ಚಿನ ನಾಯಕನಾಗಿದ್ದಾರೆ.

ಎಂ.ಜಿ.ರಾಮ್‍ಮೂರ್ತಿ ನಿರ್ಮಾಣದ ಮೆಜೆಸ್ಟಿಕ್ ಚಿತ್ರ ಬಿಡುಗಡೆಯಾಗಿ 16 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಿರ್ಮಾಪಕರು ದರ್ಶನ್ ಅವರಿಗೆ ಮಾರುತಿ 800 ಕಾರನ್ನು ಉಡುಗೊರೆಯಾಗಿ ನೀಡಿದ್ದರು.

ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಯಜಮಾನ ಚಿತ್ರವು ಯಶಸ್ವಿಗೊಂಡಿತ್ತು. ಅದೇ ಹೆಸರಿನಲ್ಲಿಯೇ ನಟ ದರ್ಶನ್ ಅವರ ಚಿತ್ರವು ತೆರೆ ಮೇಲೆ ಬರುತ್ತಿರುವುದು ವಿಶೇಷ.

ನಟ ಸೃಜನ್ ಲೋಕೇಶ್, ಅಣ್ಣ ದಿನಕರ್ ಸೇರಿದಂತೆ ಚಿತ್ರರಂಗದ ಗಣ್ಯರು ದರ್ಶನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು.

 

ಫೋಟೋ ಕ್ರೆಡಿಟ್: filmibeat.com(ಪ್ರಾತಿನಿಧ್ಯಕ್ಕಾಗಿ ಮಾತ್ರ)

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ