ತುಂಗಾನದಿಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ಮಹಿಳೆ ಕಾಲು ಜಾರಿಬಿದ್ದು ಸಾವು

ಚಿಕ್ಕಮಗಳೂರು,ಫೆ.15-ತುಂಗಾನದಿಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ಮಹಿಳೆಯೊಬ್ಬಳು ಕಾಲು ಜಾರಿಬಿದ್ದು ಸಾವನ್ನಪ್ಪಿರುವ ಘಟನೆ ಶೃಂಗೇರಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೆಣಸೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಡುಬೈಲಿನ ಚಂದ್ರವತಿ(40) ಮೃತಪಟ್ಟ ದುರ್ದೈವಿ.

ನಿನ್ನೆ ಸಂಜೆ ತುಂಗಾನದಿಯಲ್ಲಿ ಬಟ್ಟೆ ತೊಳೆಯಲೆಂದು ತೆರಳಿದ್ದಾರೆ. ಈ ವೇಳೆ ಕಾಲು ಜಾರಿ ನದಿಯೊಳಗೆ ಬಿದ್ದಿದ್ದು , ಮುಳುಗಿ ಸಾವನ್ನಪ್ಪಿದ್ದಾರೆ. ಶೃಂಗೇರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

(ಫೋಟೋ ನಿರೂಪಣೆಗಾಗಿ ಮಾತ್ರ ಸೇರಿಸಲಾಗಿದೆ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ