ಕಠ್ಮಂಡು:ಫೆ-15: ನೇಪಾಳದ ಕಮ್ಯುನಿಸ್ಟ್ ಪಾರ್ಟಿ(ಸಿಪಿಎನ್–ಯುಎಂಎಲ್) ಕೆ.ಪಿ. ಶರ್ಮಾ ಒಲಿ ಅವರನ್ನು ಮುಂದಿನ ಪ್ರಧಾನಿಯಾಗಿ ಆಯ್ಕೆ ಮಾಡಿದೆ.
ಸಂಸತ್ ಚುನಾವಣೆ ಪೂರ್ಣಗೊಂಡು ಎರಡು ತಿಂಗಳ ಬಳಿಕ ಸಿಪಿಎನ್–ಯುಎಂಎಲ್ ತನ್ನ ಪಕ್ಷದ ಅಧ್ಯಕ್ಷ ಶರ್ಮಾ ಒಲಿ(65) ಅವರನ್ನು ಮುಂದಿನ ಅವಧಿಗೆ ಪ್ರಧಾನಿಯಾಗಿ ಆಯ್ಕೆ ನಿರ್ಧಾರ ಪ್ರಕಟಿಸಿದೆ.
ಚೀನಾ ಪರವಾದ ನಿಲುವುಗಳಿಂದ ಗುರುತಿಸಿಕೊಂಡಿರುವ ಒಲಿ 2015ರ ಅಕ್ಟೋಬರ್ನಿಂದ 2016ರ ಆಗಸ್ಟ್ ವರೆಗೂ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಆದರೆ, ಬಹುಮತ ಸಾಬೀತಿಗೆ ಒಲಿ ಅವರಿಗೆ ಮಾವೋವಾದಿಗಳ ಬೆಂಬಲದ ಅಗತ್ಯವಿದೆ. ಪ್ರಚಂಡ ನೇತೃತ್ವದ ಸಿಪಿಎನ್(ಎಂ) ಬೆಂಬಲದೊಂದಿಗೆ ಸಿಪಿಎನ್–ಯುಎಂಎಲ್ ಸರ್ಕಾರ ರಚನೆಗೆ ಮುಂದಾಗಿದೆ.
ಕಳೆದ ಡಿಸೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಸಂಸತ್ತಿನ 275 ಸ್ಥಾನಗಳ ಪೈಕಿ ಸಿಪಿಎನ್–ಯುಎಂಎಲ್ ಹಾಗೂ ಸಿಪಿಎನ್(ಎಂ) ಮೈತ್ರಿ 174 ಸ್ಥಾನಗಳನ್ನು ಪಡೆದಿವೆ.