ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜೇಕಬ್‌ ಜುಮಾ ಅವರ ಆಪ್ತರಾದ ಗುಪ್ತಾ ಕುಟುಂಬದವರ ಬಂಗಲೆ ಮೇಲೆ ಪೊಲೀಸರು ದಾಳಿ

ಜೋಹಾನ್ಸ್‌ಬರ್ಗ್‌:ಫೆ-15: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜೇಕಬ್‌ ಜುಮಾ ಅವರ ಆಪ್ತರಾದ ಭಾರತೀಯ ಸಂಜಾತ ಗುಪ್ತಾ ಕುಟುಂಬದವರ ಬಂಗಲೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಸ್ಯಾಕ್ಟೋನ್‌ಡಲ್ಡ್‌ನಲ್ಲಿ ಈ ದಾಳಿ ನಡೆದಿದ್ದು ಕುಟುಂಬದ ಒಬ್ಬ ಸದಸ್ಯ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

‘ಗುಪ್ತಾ ಕುಟುಂಬವು ದಕ್ಷಿಣ ಆಫ್ರಿಕಾದಲ್ಲಿ ಅಪಾರ ಪ್ರಮಾಣದ ವ್ಯಾಪಾರ ವಹಿವಾಟನ್ನು ಹೊಂದಿದೆ. 1993ರಿಂದ ಇಲ್ಲಿಯೇ ನೆಲೆಸಿರುವ ಅತುಲ್‌, ರಾಜೇಶ್‌ ಮತ್ತು ಅಜಯ್‌ ಗುಪ್ತಾ ಅವರು, ಜುಮಾ ಅವರಿಗೆ ತೀರಾ ಸಮೀಪವಾಗಿದ್ದಾರೆ. ಈ ಮಧ್ಯೆ, ಜುಮಾ ವಿರುದ್ಧ ಸಂಸತ್ತಿನಲ್ಲಿ ಗುರುವಾರ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪಕ್ಷ ನಿರ್ಧರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ