ಬೆಂಗಳೂರಿನ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರ್ ಸ್ವಾಮಿ ಭೇಟಿಯಾಗಿ ಪ್ರಸ್ತುತ ರಾಜಕೀಯ ವಿಧ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದರು. ಭೇಟಿಯ ವೇಳೆಯಲ್ಲಿ ಜೆಡಿಎಸ್ ರಾಷ್ಟ್ರೀಯ
ಕಾರ್ಯಾಧ್ಯಕ್ಷ ಪಿಜಿಅರ್ ಸಿಂಧ್ಯಾ ಉಪಸ್ತಿತರಿದ್ದರು, ಇದೊಂದು ಸೌಹಾರ್ಧಯುತ ಭೇಟಿ ಎಂದು ಹೇಳಿದರು. ಪವಾರ್ ಮತ್ತು ಕುಮಾರ್
ಸ್ವಾಮಿ ಮಾತುಕತೆ ಬೆನ್ನಲ್ಲೆ ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಎನ್ಸಿಪಿ ಮ್ಯೆತ್ರಿ ಮಾಡಿಕೊಂಡಿವೆ. ಕರ್ನಾಟಕದಲ್ಲಿ ಮರಾಠಿ ಮತಗ
ಳನ್ನು ಸೆಳೆಯುವ ಯತ್ನದ ಜೊತೆಗೆ ಮುಂಬ್ಯೆ ಕರ್ನಾಟಕದಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವದಾಗಿದೆ. ಕರ್ನಾಟಕದಲ್ಲಿ ಎನ್ಸಿಪಿ
ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಬೀದರ್ ನಲ್ಲಿ ಸ್ಪರ್ದಿಸಲಿದೆ. ಜೆಡಿಎಸ್ ರಾಜ್ಯದಲ್ಲಿ ಬಿಎಸ್ಪಿ ಮತ್ತು ಎನ್ಸಿಪಿ ಜೊತೆ ಚುನಾವಣೆಗೂ ಮುನ್ನ ಮ್ಯೆತ್ರಿ ಮಾಡಿಕೊಂಡಿದೆ.
ರಾಹುಲ್ ಗಾಂಧಿ ರಾಜ್ಯ ಪ್ರವಾಸ ಅತ್ಯಂತ ಯಶಸ್ಸು ಕಂಡಿದೆ ಎಂದು ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು. ಪೆವ್ರವರಿ 24 ರಿಂದ
ರಾಹುಲ್ ಗಾಧಿ ಮತ್ತೆ ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಕ್ಯೆಗೊಳ್ಳಲಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ಸುಪ್ರೀಂ ಕೋರ್ಟ್ ನಾಳೆ ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ಅಂತಿಮ ತೀರ್ಪು ಪ್ರಕಟಿಸಲಿದೆ. ಈ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ನತ್ತ ಎಲ್ಲರ ದೃಷ್ಟಿ ನೆಟ್ಟಿದೆ.