ಗರ್ಭಿಣಿ ಹೊಟ್ಟೆಗೆ ಒದ್ದ ಸಿಪಿಎಂ ನಾಯಕ: ಮಹಿಳೆ ಗರ್ಭಪಾತ

ಕೋಯಿಕ್ಕೋಡ್‌ :ಫೆ-15: ಗರ್ಭಿಣಿಯೊಬ್ಬಳ ಹೊಟ್ಟೆಗೆ ಸಿಪಿಎಂ ನಾಯಕನೋರ್ವ ಒದ್ದ ಪರಿಣಾಮವಾಗಿ ಆಕೆ ಬಲವಂತದ ಗರ್ಭಪಾತಕ್ಕೆ ಗುರಿಯಾದ ಪ್ರಕರಣ ಕೋಯೊಕ್ಕೋಡ್ ನಲ್ಲಿ ನಡೆದಿದೆ.

ಸಿಪಿಎಂ ನಾಯಕನಿಂದ ಹೊಟ್ಟೆಗೆ ಒದೆತ ತಿಂದ ಮಹಿಳೆ 30 ವರ್ಷದ ಮಹಿಳೆಯಾಗಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ.

ಮಹಿಳೆಯ ಪತಿ ಮತ್ತು ಪಕ್ಕದ ಮನೆಯ ಪುರುಷನೋರ್ವನ ನಡುವೆ ಮಾತಿನ ಜಟಾಪಟಿ ನಡೆದಿತ್ತು. ಆಗ ಇನ್ನಿಬ್ಬರು ಪುರುಷರು ಅಲ್ಲಿಗೆ ಬಂದ ಮಹಿಳೆಯ ಪತಿಯ ಮೇಲೆ ಹಲ್ಲೆ ನಡೆಸತೊಡಗಿದರು. ತಡೆಯಲು ಬಂದ ಮಹಿಳೆಯನ್ನು ಹಲ್ಲೆಕೋರ ಪುರುಷರಲ್ಲಿ ಒಬ್ಬನಾದ ಸ್ಥಳೀಯ ಸಿಪಿಎಂ ನಾಯಕರು ಮಹಿಳೆಯ ಹೊಟ್ಟೆಗೆ ಒದ್ದಿದ್ದಾನೆ. ಪರಿಣಾಮವಾಗಿ ಆಕೆಗೆ ಒಡನೆಯೇ ರಕ್ತಸ್ರಾವ ಆರಂಭವಾಯಿತು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಯಿತು; ಆಕೆಯ ಗಂಭೀರ ಪರಿಸ್ಥಿತಿ ಹಿನ್ನಲೆಯಲ್ಲಿ ಆಕೆಗೆ ಅನಿವಾರ್ಯವಾಗಿ ಗರ್ಭಪಾತ ಮಾಡಲಾಯಿತು.

ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಮಹಿಳೆಯ ಹೊಟ್ಟೆಗೆ ಒದ್ದ ಮುಖ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ. ಹೊಟ್ಟೆಗೆ ಒದ್ದು ಬಲವಂತದ ಗರ್ಭಪಾತಕ್ಕೆ ಕಾರಣನಾದ ಸ್ಥಳೀಯ ಸಿಪಿಎಂ ನಾಯಕನ ಗುರುತು ಬಹಿರಂಗ ಮಾಡದಂತೆ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಸಂತ್ರಸ್ತ ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ. ಅಲ್ಲದೇ ಕೇಸನ್ನು ಕೂಡ ಹಿಂಪಡೆಯುವಂತೆ ಅವರು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.

ಆದಾಗ್ಯೂ ಬಗ್ಗದ ಸಂತ್ರಸ್ತ ಮನೆಯವರು ಪೊಲೀಸ್‌ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಕೇಸಿನ ತನಿಖೆಯನ್ನು ಚುರುಕುಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.

(ಫೋಟೋ ನಿರೂಪಣೆಗಾಗಿ ಮಾತ್ರ ಸೇರಿಸಲಾಗಿದೆ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ