ರೌಡಿ ಸೈಲೆಂಟ್ ಸುನೀಲನ ಐದು ಮಂದಿ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ

ಬೆಂಗಳೂರು, ಫೆ.15-ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಸಜ್ಜಾಗಿದ್ದ ಕುಖ್ಯಾತ ರೌಡಿ ಸೈಲೆಂಟ್ ಸುನೀಲನ ಐದು ಮಂದಿ ಸಹಚರರನ್ನು ಸಿಸಿಬಿ ಪೊಲೀಸರುಬಂಧಿಸಿದ್ದಾರೆ.

ಬೊಮ್ಮನಹಳ್ಳಿಯ ಲಕ್ಷ್ಮೀನಾರಾಯಣ(43), ಗಾಯಿತ್ರಿನಗರದ ಮಂಜುನಾಥ(32), ಹೇಮಂತ್ (24), ಜೆಜೆಆರ್ ನಗರದ ಪ್ರವೀಣ್ ವಿಕ್ಕಿ(26), ಜೆಸಿನಗರದ ಚಂದ್ರಶೇಖರ(27) ಬಂಧಿತ ದರೋಡೆಕೋರರು.

ಇಂದು ಮುಂಜಾನೆ ಸುಬ್ರಹ್ಮಣ್ಯಪುರ ವ್ಯಾಪ್ತಿಯ ರಾಜಾಜಿನಗರ 1ನೆ ಬ್ಲಾಕ್, ಆಟದ ಮೈದಾನದ ಬಳಿ 5 ಮಂದಿ ಮಾರಕಾಸ್ತ್ರಗಳೊಂದಿಗೆ ಸಂಚು ರೂಪಿಸಿ ಈ ಮಾರ್ಗದಲ್ಲಿ ಬರುವ ಸ್ಲಂ ಭರತನ ಸಹಚರರ ಮೇಲೆ ದರೋಡೆ ನಡೆಸಲು ಹೊಂಚು ಹಾಕುತ್ತಿದ್ದಾರೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ. ಈ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡಿರುವ ಪೊಲೀಸರು ಕುಖ್ಯಾತ ರೌಡಿ ಲಕ್ಷ್ಮಿನಾರಾಯಣ ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ