ಬೆಂಗಳೂರು, ಫೆ.14- ಮ್ಯಾನ್ಹೋಲ್ ಸ್ವಚ್ಛತೆಗೆ ಇಳಿದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್ ದೇವರಾಜ್ ಹಾಗೂ ಅಸಿಸ್ಟೆಂಟ್ ಹೆಲ್ತ್ ಇನ್ಸ್ಪೆಕ್ಟರ್ ಕಲ್ಪನಾ ಸೇರಿ ನಾಲ್ಕು ಮಂದಿಯನ್ನು ಎಚ್ಎಎಲ್ ಠಾಣೆ ಪೋಲೀಸ್ರು ಬಂಧಿಸಿದ್ದಾರೆ.
ನಿನ್ನೆ ಮಧ್ಯಾಹ್ನ ಎಇಸಿಎಸ್ ಲೇಔಟ್ನಲ್ಲಿರುವ ವಾಣಿಜ್ಯ ಕಟ್ಟಡದ ಯವ್ಲೋಕ್ ಹೋಟೆಲ್ನ ಮ್ಯಾನ್ಹೋಲ್ ಸ್ವಚ್ಛತೆಗೆ ಇಳಿದ ರಾಮು ಮತ್ತು ರವಿ ಎಂಬ ಕಾರ್ಮಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಹೋಟೆಲ್ ವ್ಯವಸ್ಥಾಪಕ ಆಯುಕ್ತ ಗುಪ್ತ ಹಾಗೂ ಕಟ್ಟಡ ನಿರ್ವಹಣೆ ಉಸ್ತುವಾರಿ ವೆಂಕಟೇಶ್ ಹಾಗೂ ಬಿಬಿಎಂಪಿಯ ಇಬ್ಬರು ಅಧಿಕಾರಿಗಳು ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ಬಿಬಿಎಂಪಿ ಆಯುಕ್ತರಿಗೆ ಪತ್ರ:
ಇನ್ನು ಮುಂದೆ ಮ್ಯಾನ್ಹೋಲ್ ಸ್ವಚ್ಛತೆ ವೇಳೆ ಇಂತಹ ಘಟನೆಗಳು ನಡೆದರೆ ಬಿಬಿಎಂಪಿಯನ್ನೇ ನೇರ ಹೊಣೆ ಮಾಡಲಾಗುವುದು ಎಂದು ನಗರ ಪೆÇಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.
ಬೃಹತ್ ಕಟ್ಟಡಗಳಲ್ಲಿ ನೆಲಮಹಡಿ(ಪಾರ್ಕಿಂಗ್) ಕಡ್ಡಾಯ ಹಾಗೂ ಕಟ್ಟಡಗಳಲ್ಲಿ ವಾಣಿಜ್ಯ ಕೇಂದ್ರಗಳಿಗೆ ಅವಕಾಶಕ್ಕೆ ಅನುಮತಿ ಕೊಟ್ಟು ಅನಾಹುತ ಸಂಭವಿಸಿದರೆ ಬಿಬಿಎಂಪಿಯನ್ನು ಹೊಣೆ ಮಾಡಲಾಗುವುದೆಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಫೋಟೋ ಕ್ರೆಡಿಟ್: Newindianexpress