ಫೆ-13: 26/11 ಮುಂಬೈ ಸ್ಫೋಟದ ರೂವಾರಿ ಮತ್ತು ಜಮಾತ್ -ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ನನ್ನು ಭಯೋತ್ಪಾದಕ ಎಂದು ಪಾಕಿಸ್ತಾನ ಘೋಷಿಸಿದೆ.
ಹಫೀಜ್ ಸಯೀದ್ನ ಜಮಾತ್ -ಉದ್-ದವಾ(ಜೆಯುಡಿ) ಸಂಸ್ಥೆಗಳ ಕೇಂದ್ರ ಕಚೇರಿಯ ಸುತ್ತಲು ಭದ್ರತೆಗಾಗಿ ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ಲಾಹೋರ್ ಪೊಲೀಸರು ತೆರವುಗೊಳಿಸಿದ್ದಾರೆ. ಇವುಗಳನ್ನು ಒಂದು ದಶಕದಿಂದ ಭದ್ರತಾ ದೃಷ್ಟಿಯಿಂದ ಅಳವಡಿಸಲಾಗಿತ್ತು. ‘ಸುಪ್ರೀಂಕೋರ್ಟ್ನ ಆದೇಶದ ಅನ್ವಯ 26 ಸ್ಥಳಗಳಿಂದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿದ್ದೇವೆ. ಅವುಗಳಲ್ಲಿ ಜೆಯುಡಿ ಕಚೇರಿಯೂ ಸೇರಿದೆ’ ಎಂದು ಲಾಹೋರ್ನ ಡಿಐಜಿ ಡಾ.ಹೈದರ್ ಅಶ್ರಫ್ ತಿಳಿಸಿದ್ದಾರೆ.
ವಿಶ್ವಸಂಸ್ಥೆಯು ನಿಷೇಧಿಸಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಆದೇಶಕ್ಕೆ ಪಾಕಿಸ್ತಾನದ ಅಧ್ಯಕ್ಷ ಮನ್ಮೂನ್ ಹುಸೈನ್ ಮಂಗಳವಾರ ಸಹಿ ಮಾಡಿದ್ದಾರೆ. ಭಯೋತ್ಪಾದಕ ನಿಗ್ರಹ ಕಾಯ್ದೆ–1997 ಅನ್ವಯ ನಿಷೇಧಿತ ಪಟ್ಟಿಯಲ್ಲಿ ಲಷ್ಕರ್–ಎ–ತೈಯಬಾ, ಜಮಾತ್ -ಉದ್-ದವಾ, ಹರ್ಕತ್–ಉಲ್ ಮುಜಾಹಿದ್ದೀನ್ ಸೇರಿದಂತೆ 27 ಸಂಘಟನೆಗಳು ಸೇರಿವೆ
ಫೋಟೋ ಕ್ರೆಡಿಟ್: dawn.com(ಪ್ರಾತಿನಿಧ್ಯಕ್ಕಾಗಿ ಮಾತ್ರ)