ಬೆಂಗಳೂರು,ಫೆ.12-ನಡೆದು ಹೋಗುತ್ತಿದ್ದ ವ್ಯಕ್ತಿಯನ್ನು ಒಂದೇ ಬೈಕ್ನಲ್ಲಿ ಮೂವರು ದರೋಡೆಕೋರರು ಹಿಂಬಾಲಿಸಿ ಬಂದು ಅಡ್ಡಗಟ್ಟಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಹೆಬ್ಬಾಳ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆನಂದನಗರದ ನಿವಾಸಿ ಪಡಿಯಾರ್ ಎಂಬುವರು ನಿನ್ನೆ ರಾತ್ರಿ 7 ಗಂಟೆಯಲ್ಲಿ ಎಂಎಸ್ಎಚ್ ಲೇಔಟ್, 2ನೇ ಹಂತ, 5ನೇ ಮುಖ್ಯರಸ್ತೆಯ ಕುಮಾರ್ಪಾರ್ಕ್ ಬಳಿ ನಡೆದು ಹೋಗುತ್ತಿದ್ದರು.
ಈ ಸಂದರ್ಭದಲ್ಲಿ ಒಂದೇ ಬೈಕ್ನಲ್ಲಿ ಹಿಂಬಾಲಿಸಿ ಬಂದ ಮೂವರು ದರೋಡೆಕೋರರು ಪಡಿಯಾರ್ ಅವರನ್ನು ಅಡ್ಡಗಟ್ಟಿ ಬೆದರಿಸಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ದರೋಡೆಗೊಳಗಾದ ಪಡಿಯಾರ್ ಹೆಬ್ಬಾಳ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೋಲೀಸರು ದರೋಡೆಕೋರರಿಗಾಗಿ ಶೋಧ ಕೈಗೊಂಡಿದ್ದಾರೆ.