ಅನಿಲ ಸೋರಿಕೆಯಾಗಿದೆ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ಪೀಠೋಪಕರಣಗಳು ಭಸ್ಮ

ಮಂಡ್ಯ,ಫೆ.12- ಅನಿಲ ಸೋರಿಕೆಯಾಗಿದೆ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ಪೀಠೋಪಕರಣಗಳು ಭಸ್ಮವಾಗಿರುವ ಘಟನೆ ನಡೆದಿದೆ.
ಶ್ರೀರಂಗಪಟ್ಟಣದ ಅಂಚೆಕಚೇರಿ ಬೀದಿಯ ಮರಿಯಪ್ಪ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮನೆಯಲ್ಲಿ ಐದು ಮಂದಿ ಇದ್ದು, ಮರಿಯಪ್ಪನವರ ಸೊಸೆಯಂದಿರಾದ ದಿವ್ಯ ಮತ್ತು ಛಾಯ ಅಡುಗೆ ಮಾಡುತ್ತಿದ್ದಾಗ ಸಿಲಿಂಡರ್ ಪೈಪ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಸಿಲಿಂಡರ್ ಸ್ಫೋಟಗೊಂಡಿದೆ.
ಮನೆಯಲ್ಲಿದ್ದ 50 ಸಾವಿರ ರೂ. ಮೌಲ್ಯದ ಪೀಠೋಪಕರಣಗಳು ಸ್ಪೋಟದಿಂದ ಸುಟ್ಟುಹೋಗಿವೆ. ಮನೆಯಲ್ಲಿ ಮಕ್ಕಳಾದರವಿ ಮತ್ತು ಛಾಯ ತಾಯಿ ಶಾಂತವ್ವ ಇದ್ದರು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಫೋಟೋ ಕ್ರೆಡಿಟ್: asianage.com(ಪ್ರಾತಿನಿಧ್ಯಕ್ಕಾಗಿ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ