ಬೆಳಗಾವಿ, ಫೆ.12-ನೀರು ತುಂಬಿ ಇಟ್ಟಿದ್ದ ಪಾತ್ರೆಯೊಳಗೆ ಮಗು ಬಿದ್ದು ಸಾವನ್ನಪ್ಪಿರುವ ಧಾರುಣ ಘಟನೆ ಸದಲಗಾ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಒಂದು ವರ್ಷದ ಮುತ್ತುರಾಜ್ ಮೃತಪಟ್ಟ ಮಗು.
ಯಕ್ಸಂಬಾ ಪಟ್ಟಣದ ಭೀಮರಾವ ಮಾಳಗಿ ಮತ್ತು ಸುಂಗಧಾಮಾಳಗಿ ದಂಪತಿಯ ಮಗು ಮುತ್ತುರಾಜ್ ಇಂದು ಬೆಳಗ್ಗೆ ಆಟವಾಡುತ್ತಾ ನೀರು ತುಂಬಿಟ್ಟಿದ್ದ ಪಾತ್ರೆ ಬಳಿ ಹೋಗಿ ತಲೆ ಕೆಳಗಾಗಿ ಪಾತ್ರೆಯೊಳಗೆ ಬಿದ್ದಿದೆ.
ಕೆಲ ಸಮಯದ ನಂತರ ತಾಯಿ ಬಂದು ನೋಡಿದಾಗ ಮಗು ಮೃತಪಟ್ಟಿರುವುದು ತಿಳಿದು ಬಂದಿದೆ. ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
ಸದಲಗಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೋಟೋ ಕ್ರೆಡಿಟ್: thenewsminute.com (ಪ್ರಾತಿನಿಧ್ಯಕ್ಕಾಗಿ)