ಬಿಎಂಟಿಸಿ ಬಸ್ ಏಕಾಏಕಿ ನಿಧನವಾದ ಪರಿಣಾಮ ಸರಣಿ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟರು

ಬೆಂಗಳೂರು,ಫೆ.12-ಮುಂದೆ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಏಕಾಏಕಿ ನಿಧನವಾದ ಪರಿಣಾಮ ಹಿಂದೆ ಬರುತ್ತಿದ್ದ ಮೂರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬಾಣಸವಾಡಿ ಸಂಚಾರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಬಾಬುಸಾಬ್ ಪಾಳ್ಯದ ಫ್ಲೈಓವರ್ ಎಂಟ್ರೆನ್ಸ್ ಬಳಿ ರಾತ್ರಿ 9.30ರ ಸಮಯದಲ್ಲಿ ಬಿಎಂಟಿಸಿ ಬಸ್ ಚಲಿಸುತ್ತಿತ್ತು. ಈ ವೇಳೆ ಬಸ್ ಏಕಾಏಕಿ ನಿಧನವಾದ್ದರಿಂದ ಹಿಂದೆ ಬರುತ್ತಿದ್ದ ಟಾಟಾ ಏಸ್ ವಾಹನ ಬೈಕ್ಗೆ ಗುದ್ದಿದೆ. ಬೈಕ್ ಕ್ಯಾಂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರರಾದಸಲ್ಮಾ ಆರೀಫ್(28) ಎಂಬುವರು ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಬೈಕ್ ಸವಾರ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತಮಹಿಳೆ ಚಿಕ್ಕಬಾಣವಾರ ನಿವಾಸಿ ಎಂದು ಗುರುತಿಸಲಾಗಿದೆ.
ಬಾಣಸವಾಡಿ ಸಂಚಾರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫೋಟೋ ಕ್ರೆಡಿಟ್: newskarnataka.com(ಪ್ರಾತಿನಿಧ್ಯಕ್ಕಾಗಿ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ