ಮಹಾಮಹಸ್ತಕಾಭಿಷೇಕ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಶೇಷ ಬಸ್ ಸೇವೆ ವ್ಯವಸ್ಥೆ

ಬೆಂಗಳೂರು, ಫೆ.10- ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಹಸ್ತಕಾಭಿಷೇಕ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಶೇಷ ಬಸ್ ಸೇವೆ ವ್ಯವಸ್ಥೆ ಮಾಡಿದೆ.

12 ವರ್ಷಕ್ಕೊಮ್ಮೆ ನಡೆಯುವ ಈ ಮಹಾಮಸ್ತಕಾಭಿಷೇಕ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಯಾತ್ರಾರ್ಥಿಗಳು ಆಗಮಿಸುವುದರಿಂದ ಕೆಎಸ್‍ಆರ್‍ಟಿಸಿಯು ಈ ವಿಶೇಷ ಬಸ್ ವ್ಯವಸ್ಥೆ  ಮಾಡಿದೆ. 175 ವಿಶೇಷ ಬಸ್ ಸಂಚರಿಸಲಿವೆ.

ಉಪನಗರಗಳು ಮತ್ತು ರೈಲ್ವೆ ನಿಲ್ದಾಣಗಳ ನಡುವೆ 60 ಮಿಡಿ ನಗರ ಸಾರಿಗೆ ಬಸ್‍ಗಳ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಯಾತ್ರಾರ್ಥಿಗಳಿಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡಲು ನಿಗಮವು 2್ಡ47 ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಯಾತ್ರಾ ಸ್ಥಳಗಳಿಗೆ ವೇಗದೂತ ಸಾರಿಗೆ ಸೌಲಭ್ಯ ಕಲ್ಪಿಸಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಪ್ರಯಾಣಿಕರು ನಗರದ ಸುತ್ತಮುತ್ತಲಿನ ಯಾವುದೇ ಗಣಕೀಕೃತ ಬುಕ್ಕಿಂಗ್ ಕೌಂಟರ್‍ಗಳಲ್ಲಿ ಮತ್ತು ಮಂಗಳೂರು, ಮೈಸೂರು ಇತರೆ ಸ್ಥಳಗಳಲ್ಲಿಯೂ ಸೀಟುಗಳನ್ನು ಕಾಯ್ದಿರಿಸಬಹುದು. ಮುಂಚಿತವಾಗಿ ಪ್ರಯಾಣದ ಜತೆ ಹಿಂದಿರುಗುವ ಟಿಕೆಟ್‍ಗಳನ್ನು ಬುಕ್ ಮಾಡಿದರೆ ಶೇ.10 ರಿಯಾಯಿತಿ ಪಡೆಯಬಹುದು. ಅಲ್ಲದೆ, ಮುಂಬೈ, ಪುಣೆ, ಶಿರಡಿ, ಹೈದರಾಬಾದ್, ತಿರುಪತಿ, ಚೆನ್ನೈ, ಊಟಿ, ಯರ್ನಾಕುಲಂ, ತಿರುವನಂತಪುರಂ ಮತ್ತಿತರ ಸ್ಥಳಗಳಲ್ಲಿಯೂ ಬುಕ್ಕಿಂಗ್ ಸೌಲಭ್ಯವಿದೆ.

ನಿಗಮದ ಬಸ್‍ಗಳಲ್ಲಿ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಬೆಂಗಳೂರು, ಮಂಗಳೂರು, ಮೈಸೂರು ನಗರ ವ್ಯಾಪ್ತಿಗಳಲ್ಲಿ ಆಯಾ ನಗರ ಸಾರಿಗೆ ಬಸ್‍ಗಳಲ್ಲಿ ಉಚಿತ ಪಿಕಪ್ ಮತ್ತು ಡ್ರಾಪ್ ಸೌಲಭ್ಯ ಇರುತ್ತದೆ.

Photo Credit: mahamastakabhisheka.com

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ